ಗೋಣಿಕೊಪ್ಪಲು, ಮಾ. 22: ಬಿಟ್ಟಂಗಾಲ ಗ್ರಾಮದಲ್ಲಿ ಎಪಿಎಂಸಿಯ ಸದಸ್ಯೆ ನಾಮೇರ ಧರಣಿ ಮತ್ತು ನಾಮ ನಿರ್ದೇಶಿತ ಸದಸೆÀ್ಯ ಕಡೇಮಾಡ ಕುಸುಮ ಜೋಯಪ್ಪ ನೇತೃತ್ವದಲ್ಲಿ ರೈತ ನೋಂದಣಿ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭ ಗೋಣಿಕೊಪ್ಪಲು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷÀ ಸುವಿನ್ ಗಣಪತಿ ಅವರು ಮಾತನಾಡಿ, ರೈತರು ಉತ್ಪಾದಿಸಿದ ಉತ್ಪನ್ನಗಳಿಗೆ ಆನ್‍ಲೈನ್ ಮೂಲಕ ಮಾರುಕಟ್ಟೆ ಸೌಲಭ್ಯ ಪಡೆಯಲು ಪ್ರತಿಯೊಬ್ಬ್ಬ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಹಾಗೂ ರೈತರು ವರ್ಷ ಪೂರ್ತಿ ಶ್ರಮವಹಿಸಿ ಬೆಳೆದ ಬೆಳೆಯನ್ನು ಗುತ್ತಿಗೆಗೆ ಕೊಡದೆ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯಡಿ ಮಾರಾಟ ಮಾಡುವಂತೆ ಕರೆ ನೀಡಿದರು.

ಜಿ.ಪಂ. ಸದಸ್ಯ ಮಹೇಶ್ ಗಣಪತಿ ಈ ಸಂದರ್ಭ ಮಾತನಾಡಿದರು. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬಾ ಬೆಳ್ಯಪ್ಪ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೋಂದಮ್ಮ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಬೇಟೋಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಮನು ರಾಮಚಂದ್ರ, ರುದ್ರಗುಪ್ಪೆ ವಿ.ಎಸ್.ಎಸ್.ಎನ್. ಅಧ್ಯಕ್ಷ ವಾಸು ಮುದ್ದಯ್ಯ, ಬಿಟ್ಟಂಗಾಲ ವಿ.ಎಸ್.ಎಸ್.ಎನ್. ಅಧ್ಯಕ್ಷ ಸಿ.ಕೆ. ನಂಜಪ್ಪ ಅವರುಗಳು ಮಾತನಾಡಿದರು.

ಬಿಜೆಪಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಲಾಲ ಭೀಮಯ್ಯ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಂಜಿತಂಡ ಮಂದಣ್ಣ, ಎಪಿಎಂಸಿ ಮಾಜಿ ನಾಮ ನಿರ್ದೇಶಿತ ಸದಸ್ಯ ಉಮೇಶ್ ಕೇಚಮಯ್ಯ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಗ್ರಾಮ ಪಂಚಾಯಿತಿ ಸದಸ್ಯರು, ವಿ.ಎಸ್.ಎಸ್.ಎನ್. ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಿಬ್ಬಂದಿಗಳು ರೈತರ ಹೆಸರು ನೋಂದಾಯಿಸಲು ವಿಳಾಸ, ಆಧಾರ್ ಕಾರ್ಡ್ ಮತ್ತಿತರ ಮಾಹಿತಿಯನ್ನು ಪಡೆದುಕೊಂಡರು.