ಸೋಮವಾರಪೇಟೆ, ಮಾ. 22: ಸಮೀಪದ ಗೌಡಳ್ಳಿಯ ಹಿಂದೂ ಗೆಳೆಯರ ಬಳಗದ ವತಿಯಿಂದ ಯುಗಾದಿ ಪ್ರಯುಕ್ತ ತಾ. 28 ಮತ್ತು 29ರಂದು ಅಂತರ್ ರಾಜ್ಯಮಟ್ಟದ ಮುಕ್ತ ಫುಟ್ಬಾಲ್ ಪಂದ್ಯಾಟ ಆಯೋಜಿಸಲಾಗಿದ್ದು, ಪಂದ್ಯಾವಳಿಯ ಟ್ರೋಫಿಯನ್ನು ಪತ್ರಿಕಾಭವನದಲ್ಲಿ ಅನಾವರಣಗೊಳಿಸಲಾಯಿತು.ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಆಟಗಾರರು ಭಾಗವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಎಸ್.ಎನ್. ಪೃಥ್ವಿ ತಿಳಿಸಿದರು.

ತಾ. 28 ಮತ್ತು 29ರಂದು ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಪ್ರಥಮ ಬಹುಮಾನ 1 ಲಕ್ಷ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 50ಸಾವಿರ ರೂ.ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವದು, ಅಲ್ಲದೆ ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುವದು ಎಂದರು.

ಆಸಕ್ತ ತಂಡಗಳು ತಾ.26ರ ಒಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪಂದ್ಯಾಟಕ್ಕೆ ಸಮವಸ್ತ್ರ ಕಡ್ಡಾಯವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448106172, 9481057522 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು. ಟ್ರೋಫಿ ಅನಾವರಣ ಸಂದರ್ಭ ಜಿ.ಎನ್. ವಿಜಯ್‍ಕುಮಾರ್, ಪುನೀತ್, ಕುಮಾರ್ ಉಪಸ್ಥಿತರಿದ್ದರು.