ಗೋಣಿಕೊಪ್ಪಲು, ಮಾ. 22: ಅಂತರರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಇಲ್ಲಿನ ಕಾವೇರಿ ಕಾಲೇಜಿನಲ್ಲಿ ವಿಜ್ಞಾನ ದಿನ ಆಚರಿಸಲಾಯಿತು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ ಕಾರ್ಯಕ್ರಮ ಉದ್ಘಾಟಿಸಿದರು.

ಹವಾಮಾನ ವೈಪರಿತ್ಯದಿಂದ ಜೀವ ಸಂಕುಲಗಳಿಗೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿ.ಎನ್. ಮನೀಶಾ ಪ್ರಥಮ, ಎಂ.ಎಸ್. ಮೇಘ ದ್ವಿತೀಯ, ಎಂ.ಬಿ. ರಿಯಾ ತೃತೀಯ, ವಿಜ್ಞಾನ ವಿಚಾರ ಮಂಡನೆಯಲ್ಲಿ ಎಂ.ಆರ್. ಮುಹ್‍ಸಿನಾ ಪ್ರಥಮ, ದೀಕ್ಷಿತ್ ಅಕ್ಕಮ್ಮ ದ್ವಿತೀಯ, ದರ್ಶನ್ ತೃತೀಯ ಸ್ಥಾನ ಪಡೆದುಕೊಂಡರು.

ಮಡಿಕೇರಿ ಎಫ್‍ಎಂಸಿ ಕಾಲೇಜು ಪ್ರಾಧ್ಯಾಪಕ ಕೆ.ಪಿ. ನಾಗರಾಜ್ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕಿ ಡಾ. ಮೊಣ್ಣಂಡ ಶೋಭಾ, ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪ್ರೊ. ಕೆ.ವಿ. ಕುಸುಮಾಧರ್, ಉಪನ್ಯಾಸಕರುಗಳಾದ ನಿಶಾ, ಕೃತಿಕಾ, ಕಲ್ಪಿತಾ, ಸಚಿನ್ ವಿದ್ಯಾರ್ಥಿ ನಾಯಕರಾದ ಕಂಪನಾ, ಕನಿತಾ, ದರ್ಶನ್ ಉಪಸ್ಥಿತರಿದ್ದರು. ದೀಪ್ತಿ ದೇವಮ್ಮ ನಿರೂಪಿಸಿದರು.