ಮಡಿಕೇರಿ, ಮಾ. 21: ಪ್ರತಿಷ್ಠಿತ ಎಸಿಎಸ್‍ಐಆರ್ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ, ಪುಣೆಯ ರಾಸಾಯನ ಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ‘ಇಲೆಕ್ಟ್ರಾನಿಕಲ್ ಅಪ್ಲಿಕೇಶನ್ಸ್ ಆಫ್ ಪೋರಸ್ ಪಾಲಿಮೆರಿಕ್ ಮೆಟಿರಿಯಲ್ಸ್ ಅಂಡ್ ದೇರ್ ಡೆರಿವೇಟಿವ್ಸ್’ ವಿಷಯಕ್ಕೆ ಬಾರಿಕೆ ಹರ್ಷಿತಳಿಗೆ ಡಾಕ್ಟರೇಟ್ ಪದವಿ ದೊರೆತಿದೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಈಕೆ ಜರ್ಮನಿಯ ಡಾರ್ಟ್‍ಮಂಡ್‍ಗೆ ತೆರಳಲಿದ್ದಾಳೆ. ಕಾವೇರಿ ಬಡಾವಣೆಯ ನಿವಾಸಿ ಬಾರಿಕೆ ಅಯ್ಯಪ್ಪ ಮತ್ತು ರತ್ನಶೀಲ ಅವರ ಪುತ್ರಿಯಾಗಿರುವ ಈಕೆ ನಗರದ ಸಂತ ಸೋಸೆಫರ ಬಾಲಕಿಯರ ಶಾಲೆಯ ಹಳೆಯ ವಿದ್ಯಾರ್ಥಿನಿ.