ಚೆಟ್ಟಳ್ಳಿ, ಮಾ. 19: ಚೆಟ್ಟಳ್ಳಿಯಲ್ಲಿ ನಡೆದ ನಾಲ್ಕನೇ ವರ್ಷದ ಕೆಕೆಎಫ್‍ಸಿ ಕಪ್-2017ನ್ನು ವೈನಾಡಿನ ವೈನಾಡ್ ಎಫ್‍ಸಿ ತಂಡ ಗೆಲುವನ್ನು ಸಾಧಿಸುವ ಮೂಲಕ ಬಹುಮಾನವನ್ನು ಪಡೆದು ಕೊಂಡಿತು.ಚೆಟ್ಟಳ್ಳಿಯ ಪ್ರೌಢ ಶಾಲಾ ಮೈದಾನದಲ್ಲಿ 3 ದಿನಗಳ ಕಾಲ ನಡೆದ ಕೆಕೆಎಫ್‍ಸಿ ಕಪ್-2017 ಫುಟ್‍ಬಾಲ್ 9+2ರ ಪಂದ್ಯಾವಳಿಯಲ್ಲಿ 24 ತಂಡಗಳು ಭಾಗವಹಿಸಿ ಅಂತಿಮವಾಗಿ ಅತಿಥೇಯ ಕೆಕೆಎಫ್‍ಸಿ ತಂಡ ಹಾಗೂ ವೈನಾಡ್ ಎಫ್‍ಸಿ ತಂಡದ ನಡುವೆ ನಡೆದ ಹಣಾಹಣಿಯಲ್ಲಿ 1-0 ಗೋಲುಗಳಿಂದ ವೈನಾಡ್ ಎಫ್‍ಸಿ ತಂಡ ಕೆಕೆಎಫ್‍ಸಿ ತಂಡವನ್ನು ಮಣಿಸಿ ಗೆಲುವು ಸಾಧಿಸಿತು.
ಕೆಕೆಎಫ್‍ಸಿ ಅಧ್ಯಕ್ಷ ಮೊಹಮದ್ ರಫಿ ಅಧ್ಯಕ್ಷತೆಯಲ್ಲಿ ನಡೆದ ಕೆಕೆಎಫ್‍ಸಿ ಕಪ್-2017ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೇಷ್ಮೆ ಮಾರಾಟ ಮಂಡಳಿ ನಿಗಮದ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಫುಟ್‍ಬಾಲ್ ಅಸೋಸಿಯೇಶನ್ ಅಧ್ಯಕ್ಷ ಮೋಹನ್ ಅಯ್ಯಪ್ಪ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶೌಕತ್ ಆಲಿ, ಜೆಡಿಎಸ್‍ನ ರಾಜ್ಯ ಕಾರ್ಯದರ್ಶಿ ವಿ.ಎಂ. ವಿಜಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಕಾರ್ಮಿಕ ಮುಖಂಡ ವಿ.ಪಿ. ಶಶಿಧರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ, ಮಡಿಕೇರಿ ನಗರಸಭಾ ಸದಸ್ಯ ಉದಯ, ನಿವೃತ್ತ ಯೋಧ ಚಂದ್ರ, ಕಂಡಕರೆ ಬ್ರೈಟ್ ಸ್ಪೋಡ್ಸ್ ಕ್ಲಬ್‍ನ ಕಾರ್ಯದರ್ಶಿ ಮನ್ಸೂರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡೆನ್ನಿ ಬರೋಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಮ್ ಜೋಸೆಫ್, ಕೆಕೆಎಫ್‍ಸಿ ಸಲಹೆಗಾರ ಶಶಿಕುಮಾರ್, ನೆಲ್ಲಿಹುದಿಕೇರಿ ಕಾಂಗ್ರೆಸ್ ವಲಯ ಅಧ್ಯಕ್ಷ ಅಬ್ದುಲ್ ರಜಾಕ್, ಪಿಡಬ್ಲ್ಯೂಡಿ ಗುತ್ತಿಗೆದಾರ ಮಂಜುನಾಥ್, ಕೆಕೆಎಫ್‍ಸಿಯ ಗೌರವ ಅಧ್ಯಕ್ಷ ರೈಮಂಡ್ ಸರೋವರವರು ಹಾಜರಿದ್ದರು. ಅತಿಥಿಗಳಿಂದ ಪ್ರಥಮ, ದ್ವಿತೀಯ, ತೃತೀಯ ಹಾಗೂ ವೈಯಕ್ತಿಕ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಕೆಕೆಎಫ್‍ಸಿಯ ಕಾರ್ಯದರ್ಶಿ ಜುಬೇರ್, ವಂದನಾರ್ಪಣೆಯನ್ನು ಶಶಿಕುಮಾರ್ ನೆರವೇರಿಸಿದರು.