ವೀರಾಜಪೇಟೆ, ಮಾ. 19: ಸಾರ್ವಜನಿಕರು ಇಂದಿನ ಆಧುನಿಕ ವ್ಯವಸ್ಥೆಗಳಿಗೆ ಹೊಂದಿಕೊಂಡು ಸರಕಾರಿ ಕಚೆರಿಯ ಕೆಲಸಗಳಿಗೆ ಸಹಕಾÀರ ನೀಡಬೇಕು ಆಧುನಿಕ ವ್ಯವಸ್ಥೆÀ ಮೊದಲು ಕಷ್ಟವೆನ್ನಿಸಿದರೂ ನಂತರ ಜನರಿಗೆ ಅದು ಅನುಕೂಲವಾಗಲಿದೆ. ಸಮಯ ವ್ಯರ್ಥ ಮಾಡಿ ಕಚೇರಿಗೆ ಅಲೆದಾಡುವದು ತಪ್ಪುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಇ – ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ನೂತನವಾಗಿ ಪಂಚಾಯಿತಿ ಆವರಣದಲ್ಲಿ ಅಳವಡಿಸಿರುವ ಎಲ್.ಇ.ಡಿ. ಟಿವಿಯನ್ನು ರಿಮೋಟ್ ನಲ್ಲಿ ಉದ್ಘಾಟಿಸಿ, ಮಾತನಾಡಿ ಸರಕಾರದ ಆದೇಶ ದಂತೆ ಸಾರ್ವಜನಿಕರಿಗೆ ಇ – ತಂತ್ರಾಂಶದ ಸೇವೆಗಳಾದ, ನೀರಿನ ಸಂರ್ಪಕ, ಕಟ್ಟಡ ಪರವಾನಿಗೆ, ಖಾತೆ ವರ್ಗಾವಣೆ, ಜನನ – ಮರಣ ಪತ್ರಗಳನ್ನು ಜನರು ಸುಲಭವಾಗಿ ಪಡೆಯಬಹುದು. ಇಲ್ಲವಾದರೆ ಜನರು ಇವುಗಳಿಗೆ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ನಿತ್ಯ ಅಲೆದಾಡಬೇಕಿತ್ತು. ಕೆಲವು ಅಧಿಕಾರಿಗಳಿಗೆ ಹಣ ನಿಡಬೇಕಿತ್ತು. ಈಗ ಇವುಗಳಿಗೆ ಮುಕ್ತಿ ನೀಡಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಯ ವ್ಯವಸ್ಥೆ ಜಾರಿ ಬಂದಿದೆ. ಈ ನಿಟ್ಟಿನಲ್ಲಿ ಸರಕಾರ ಈಗ ಇನ್ನು ಮುಂದೆ ಹೋಗಿ ಈ ರೀತಿ ಇ–ತಂತ್ರಾಂಶದ ಮೂಲಕ ಅರ್ಜಿದಾರರಿಗೆ ತಮ್ಮ ಕಡತಗಳ ಪ್ರಗತಿ ಹಾಗೂ ದೂರುಗಳ ಬಗ್ಗೆ ಕ್ರಮದ ಕುರಿತು ಎಲ್‍ಸಿಡಿ ಟಿವಿಯಲ್ಲಿ ನಿರಂತರ ಮಾಹಿತಿಗಳು ಮೂಡಿ ಬರುತ್ತದೆ. ಇದರಿಂದ ಜನರಿಗೆ ಮಾಹಿತಿ ಪಡೆಯಲು ಅನುಕೂಲ ವಾಗಲಿದೆ. ಕಚೇರಿಯಲ್ಲಿ ಪಾರದರ್ಶಕತೆಯ ನಿಯಮವನ್ನು ಕಾದುಕೊಂಡು ಹೋಗಲು ಸಹಾಯವಾಗುತ್ತದೆ. ಇನ್ನು ಮುಂದೆ ಕಾಗದದ ಬಳಕೆಯನ್ನು ಕೈ ಬಿಟ್ಟು, ಕಾಗದ ಮುಕ್ತ ವ್ಯವಾಹರ ನಡೆಸುವಂತಾಗಲಿ ಎಂದು ಬೋಪಯ್ಯ ಹೇಳಿದರು.

ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಮಾತನಾಡಿ, ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಯಲ್ಲಿ ನಾಗರಿಕ ಸ್ನೇಹಿ ತಂತ್ರಾಂಶಗಳಾದ ಜನಹಿತ, ಜಲನಿಧಿ, ಇ – ಆಸ್ತಿ ಮತ್ತು ಜನನ – ಮರಣ ದಾಖಲಾತಿಯನ್ನು ಯಶ್ವಸಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರಿಂದ ನಾಗರೀಕರು ಇ ತಂತ್ರಾಂಶದ ಮೂಲಕ ಸ್ಥಳಿಯ ಸಂಸ್ಥೆಗಳ ಆಡಳಿತದಲ್ಲಿ ಹೆಚ್ಚಿನ ರೀತಿಯಲ್ಲಿ ಪಾರದರ್ಶಕತೆಯನ್ನು, ಉತ್ತರದಾಯಿತ್ವ ಹಾಗೂ ಸಾರ್ವಜನಿಕ ಸಹಭಾಗಿತ್ವ ಸಾಧಿಸುವ ದೃಷ್ಠಿಯಿಂದ ಮುನಿಸಿಪಲ್ ಡಾಟಾ ಸೊಸೈಟಿ ಸೇವಾ ದತ್ತಾಂಶವನ್ನು ಎಲ್‍ಇಡಿ ಟಿವಿ ಮೂಲಕ ಸಾರ್ವಜನಿಕರಿಗೆ ನೇರ ಪ್ರಸಾರ ಮಾಡಲಾಗುತ್ತಿದೆಎಂದು ಮಾಹಿತಿ ನೀಡಿದರು. ಈ ಸಂದರ್ಭ ಪ.ಪಂ. ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನೀಂ ಅಕ್ತರ್ , ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ, ಪ ಪಂ ಅಭಿಯಂತರ ಹೇಮ್ ಕುಮಾರ್, ಪ. ಪಂ. ಸದಸ್ಯರುಗಳು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ವಿ.ಪೇ ಫೆಡರೇಶನ್ ಸಹಕಾರ ಮಾರಾಟ ಮಹಮಂಡಳದ ಉಪಾದ್ಯಕ್ಷ ಮಲ್ಲಂಡ ಮಧು ದೇವಯ್ಯ ಮುಂತಾದವರು ಉಪಸ್ಥಿತರಿದ್ದರು.