ಮಡಿಕೇರಿ, ಮಾ. 3: ಜಿಲ್ಲಾ ಯುವ ಸಮಾವೇಶ, ಕ್ರೀಡಾ ಸಾಮಗ್ರಿ ವಿತರಣೆ, ಯುವ ಸಂಘ ಪ್ರಶಸ್ತಿ, ಯುವ ಕೃತಿ ಪ್ರದರ್ಶನ, ಯುವ ಪ್ರಶಸ್ತಿ ಪ್ರದಾನ, ಸಹಾಯ ಧನ ವಿತರಣೆ, ಯುವ ಕಾರ್ಯಾಗಾರ ಹಾಗೂ ಜಿಲ್ಲಾ ಯುವ ಸಮ್ಮೇಳನ ತಾ. 6 ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ, ಕೊಡಗು ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆÉ, ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕು ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಗಳು ನಡೆಯಲಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪ್ರತಾಪ ಸಿಂಹ ಯುವ ಸಂಘ ಪ್ರಶಸ್ತಿ ಪ್ರದಾನ ಮಾಡಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಯುವ ಕ್ರೀಡಾ ಮಿತ್ರ ಅನುದಾನ ನೀಡಲಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ವೈಯಕ್ತಿಕ ಯುವ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಕ್ರೀಡಾ ಸಾಮಗ್ರಿ ವಿತರಿಸಲಿದ್ದಾರೆ. ವೀಣಾ ಅಚ್ಚಯ್ಯ ಯುವ ಸಂಘಗಳಿಗೆ ಅನುದಾನ ನೀಡಲಿದ್ದು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ನೋಟು ಅಮಾನ್ಯ ಒಳಿತು ಕೆಡುಕು ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ವಿಶೇಷ ಆಹ್ವಾನಿತರಾಗಿರುತ್ತಾರೆಂದು ಜೋಯಪ್ಪ ಮಾಹಿತಿ ನೀಡಿದರು.

ಈ ಬಾರಿ ಪೊನ್ನಂಪೇಟೆಯ ಚೈತನ್ಯ ಕಲಾ ಮಂಡಳಿಯು ನೆಹರೂ ಯುವ ಕೇಂದ್ರ ನೀಡುವ ಉತ್ತಮ ಸಂಘÀ ಪ್ರಶಸ್ತಿಯನ್ನು ಪಡೆದಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಉತ್ತಮ ಸಂಘ ಪ್ರಶಸ್ತಿಯನ್ನು ಚೆಂಬು ಗ್ರಾಮದ ಶ್ರೀ ರಾಮ ಯುವಕ ಸಂಘ ಹಾಗೂ ಪೊನ್ನಂಪೇಟೆಯ ಡಾ. ಅಂಬೇಡ್ಕರ್ ಕಲಾ ಯುವತಿ ಮಂಡಳಿ ಪಡೆದುಕೊಂಡಿದೆ. ವೈಯಕ್ತಿಕ ಯುವ ಪ್ರಶಸ್ತಿಯನ್ನು ಬಿಳಿಗೇರಿಯ ಶ್ರೀ ಭಗವತಿ ಯುವಕ ಸಂಘದ ಎಂ.ಎ. ಟಾಟಾ ದೇವಯ್ಯ, ಕಾರ್ಯದರ್ಶಿ ಬಿ.ಎನ್. ಪ್ರಸಾದ್, ಚೆಂಬುವಿನ ಶ್ರೀರಾಮ ಯುವಕ ಸಂಘÀದ ಪ್ರಜ್ವಲ್ ಬೊಳ್ತಜೆ, ಪೊನ್ನಂಪೇಟೆ ಅಂಬೇಡ್ಕರ್ ಕಲಾ ಯುವತಿ ಮಂಡಳಿಯ ಜೆ. ನಿರ್ಮಲ, ಪೊನ್ನಂಪೇಟೆಯ ಚೈತನ್ಯ ಕಲಾ ಯುವತಿ ಮಂಡಳಿಯ ವೀಣಾ ಮನು ಕುಮಾರ್ ಪ್ರಶಸ್ತಿಗಳಿಸಿದ್ದಾರೆ.

ನಮ್ಮೂರ ಶಾಲೆಗೆ ನಮ್ಮ ಯುವ ಜನ ಕಾರ್ಯಕ್ರಮದ ಅನುದಾನದಡಿ ಬಿಳಿಗೇರಿಯ ಶ್ರೀ ಭಗವತಿ ಯುವಕ ಸಂಘ, ಮಾಯಮುಡಿಯ ಕಾವೇರಿ ಯುವಕ ಸಂಘ, ತೋಳೂರು ಶೆಟ್ಟಳ್ಳಿಯ ಗಂಧರ್ವ ಯುವಕ ಸಂಘÀ ತಲಾ ರೂ. 1 ಲಕ್ಷ ಪಡೆಯಲಿವೆ. ಕ್ರೀಡಾ ಮಿತ್ರ ಕಾರ್ಯಕ್ರಮದಡಿ ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ಯುವಕ ಸಂಘ, ಕಬ್ಬಡಗೇರಿ ಗ್ರಾಮದ ಕಬ್ಬಡಗೇರಿ ಯುವಕ ಸಂಘÀ, ಬಿಳಿಗೇರಿ ಗ್ರಾಮದ ಶ್ರೀ ಭಗವತಿ ಯುವಕ ಸಂಘÀ, ಅರವತ್ತೊಕ್ಲು ಗ್ರಾಮದ ಪ್ರತಿಭಾ ಯುವಕ ಸಂಘ, ಪೊನ್ನಂಪೇಟೆಯ ಜೈ ಭೀಮ್ ಕಲಾ ಯುವಕ ಸಂಘ ಹಾಗೂ ನಿಸರ್ಗ ಯುವತಿ ಮಂಡಳಿ ತಲಾ ರೂ. 25 ಸಾವಿರವನ್ನು ಪಡೆಯಲಿವೆಯೆಂದು ಕಾರ್ಯದರ್ಶಿ ಪಿ.ಪಿ. ಸುಕುಮಾರ್ ಮಾಹಿತಿ ನೀಡಿದರು.