ಸಿದ್ದಾಪುರ, ಮಾ. 3: ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಸಮೀಪದ ಕರಡಿಗೋಡು ನಿವಾಸಿ ವಿನು ಎಂಬಾತ ಸಿದ್ದಾಪುರದ ವಿಶ್ವನಾಥ್ ಎಂಬವರಿಗೆ ನೀಡಿದ್ದ ಚೆಕ್ ಹಣವಿಲ್ಲದೆ ಅಮಾನ್ಯಗೊಂಡಿತ್ತು. ವೀರಾಜಪೇಟೆ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ವಿನು ಆರೋಪಿ ಎಂದು ತೀರ್ಪು ನೀಡಿತ್ತು. ತಲೆಮರೆಸಿಕೊಂಡಿದ್ದ ವಿನುವನ್ನು ಸಿದ್ದಾಪುರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ವಿನುವಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅರ್ಜಿದಾರ ವಿಶ್ವನಾಥ್ ಪರ ಸಿದ್ದಾಪುರದ ವಕೀಲ ಶ್ರೀಬಾಬು ವಕಾಲತ್ತು ವಹಿಸಿದ್ದರು.