ಮಡಿಕೇರಿ, ಫೆ. 2: ವೀರಾಜಪೇಟೆ ತಾಲೂಕಿನ ಹುದಿಕೇರಿ ಗ್ರಾಮದ ಚಂಗುದಂಡ ಕುಟುಂಬಸ್ಥರ ಮನೆಗಾಗಿ ಹಾದು ಹೋಗುವ ಸಾರ್ವಜನಿಕ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನೆರವೇರಿಸಿದರು. ಪ್ರಮುಖರಾದ ಪಿ.ಕೆ. ಪೊನ್ನಪ್ಪ, ನವೀನ್, ಅರಣ್ಯ ನಿಗಮದ ನಿರ್ದೇಶಕ ವಾಸು ಕುಟ್ಟಪ್ಪ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಜಾ ಅಚ್ಯುತನ್, ಹುದಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ರಂಡ ರೇಖಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.