ಸೋಮವಾರಪೇಟೆ, ಫೆ. 2: ಈ ಹಿಂದೆ ಮದ್ಯವ್ಯಸನಿಗಳಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನಾ ಶಿಬಿರಕ್ಕೆ ಸೇರ್ಪಡೆಗೊಂಡು ಮದ್ಯಮುಕ್ತರಾಗಿ ನವಜೀವನ ನಡೆಸುತ್ತಿರುವ ಸದಸ್ಯರು ಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರಮಾಣ ಪತ್ರ ವಿತರಿಸಿದರು.ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ 945ನೇ ಮದ್ಯ ವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿದ್ದ 31 ಮಂದಿ ಸದಸ್ಯರೂ ಸೇರಿದಂತೆ ಕುಟುಂಬದ ವರು ಹಾಗೂ ಯೋಜನೆಯ ಸಿಬ್ಬಂದಿಗಳು ಧರ್ಮಸ್ಥಳಕ್ಕೆ ತೆರಳಿ ಶತದಿನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಪಡೆದರು.
ಮದ್ಯಮುಕ್ತ ಸಮಾಜದಿಂದ ಮಾತ್ರ ಸಾಮಾಜಿಕ ನೆಮ್ಮದಿ ಕಾಣಲು ಸಾಧ್ಯ. ಮದ್ಯಕ್ಕೆ ದಾಸರಾಗಿರುವವರು ತಮ್ಮ ಕುಟುಂಬದಿಂದಲೂ ತಾತ್ಸಾರಕ್ಕೆ ಒಳಗಾಗಿ ಸಮಾಜದಲ್ಲಿ ನಿಕೃಷ್ಟ ಬದುಕು ಸಾಗಿಸಬೇಕಾಗುತ್ತದೆ. ಇಂತಹ ವರನ್ನು ಗುರುತಿಸಿ ಯೋಜನೆಯ ಮೂಲಕ ನಡೆಸುವ ಶಿಬಿರದಲ್ಲಿ ಮನಃಪರಿವರ್ತನೆ ಮಾಡಿ ನವಜೀವನ ನೀಡುವ ಕಾರ್ಯಕ್ರಮವೇ ಮದ್ಯವರ್ಜನ ಶಿಬಿರಗಳಾಗಿವೆ ಎಂದು ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಇದೀಗ ಮದ್ಯಮುಕ್ತರಾಗಿರು ವವರು ಇನ್ನೆಂದಿಗೂ ಜೀವನದಲ್ಲಿ ಅದರತ್ತ ಸುಳಿಯದೇ ಸಾಮಾಜಿಕ ಗೌರವಾದರಗಳೊಂದಿಗೆ ನೆಮ್ಮದಿಯ ಬದುಕು ಸಾಗಿಸುವಂತಾಗಬೇಕೆಂದು ಕಿವಿಮಾತು ಹೇಳಿದ ಹೆಗ್ಗಡೆಯವರು, ನವಜೀವನ ಸಮಿತಿ ಸದಸ್ಯರಿಗೆ ಶುಭಹಾರೈಸಿದರು.
ಈ ಸಂದರ್ಭ ಜನ ಜಾಗೃತಿ ವೇದಿಕೆ ಅಧ್ಯಕ್ಷÀ ವಿವೇಕ್ ಪಿಂಟೋ ಪಾಯಸ್, ಯೋಜನೆಯ ಸೋಮವಾರಪೇಟೆ ವಲಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಎಂ.ಎ. ರುಬೀನಾ, ಶೈಲಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಜೆ. ಗಿರೀಶ್, ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ, ಗಂಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಯೋಜನೆಯ ಸೋಮವಾರಪೇಟೆ ವಲಯದ ಪರವಾಗಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಲಾಯಿತು.