ಮಡಿಕೇರಿ, ಮೇ 2: ಮಡಿಕೇರಿ ವಕೀಲರ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಮಂಡಳಿಗೆ 2016-18ರ ಸಾಲಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಟಿ. ಜೋಸೆಫ್ ಪುನರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಡಿ. ದಯಾನಂದ, ಕಾರ್ಯದರ್ಶಿಯಾಗಿ ಪಿ.ಯು. ಪ್ರೀತಮ್, ಜಂಟಿ ಕಾರ್ಯದರ್ಶಿಯಾಗಿ ಬಿ.ಸಿ. ಪೂವಯ್ಯ, ಖಜಾಂಚಿಯಾಗಿ ಕೆ.ಎಸ್. ರತನ್ ತಮ್ಮಯ್ಯ ಹಾಗೂ ನಿರ್ದೇಶಕರುಗಳಾಗಿ ಎಂ.ಕೆ. ಅರುಣ್ ಕುಮಾರ್, ಬಿ.ಸಿ. ದೇವಿಪ್ರಸಾದ್, ಬಿ.ಡಿ. ಕಪಿಲ್ ಕುಮಾರ್, ಎ.ಎ. ಪೆಮ್ಮಯ್ಯ, ಬಿ.ಎಸ್. ರುದ್ರ ಪ್ರಸನ್ನ, ಎಂ.ಕೆ. ಶರತ್ ಕುಮಾರ್, ಎಂ.ವಿ.ಸಂಜಯ್ ರಾಜ್ ಹಾಗೂ ಕೆ.ನಳಿನಿ ಪೊನ್ನಪ್ಪ ಅವರು ಎರಡು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಪಿ.ಯು. ಪ್ರೀತಮ್ ತಿಳಿಸಿದ್ದಾರೆ.