ನಾಪೋಕ್ಲು, ಮೇ 5: ನೆಲಜಿ ಶ್ರೀ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಂಘದ ವತಿಯಿಂದ ಜರುಗುವ ವರ್ಧಂತ್ಯೋತ್ಸವ ಜರುಗಿತು. ಭಕ್ತಾದಿಗಳು ಹರಕೆ, ಸೇವೆ ಸಲ್ಲಿಸಿದರು.

ಈ ಸಂದರ್ಭ ತುಲಾಬಾರ ಸೇವೆ, ಮಹಾಪೂಜೆ ಹಾಗೂ ದೇವರ ನೃತ್ಯಬಲಿ ಜರುಗಿದವು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಿತು. ಇದಕ್ಕೂ ಮೊದಲು ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದ ವಾರ್ಷಿಕ ಮಹಾಸಭೆ ದೇವಾಲಯದ ಆವರಣದಲ್ಲಿ ಜರುಗಿತು. ಭಕ್ತ ಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ದೇವಾಲಯದ ಅಭಿವೃದ್ಧಿ ಬಗ್ಗೆ ಚರ್ಚಿಸಿ ವಿವಿಧ ಕೆಲಸ ಕಾರ್ಯ ನಡೆಸುವ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾಟೇರಿರ ಕಾರ್ಯಪ್ಪ, ಕೈಯಂದಿರ ರಮೇಶ್, ತಕ್ಕಮುಖ್ಯಸ್ಥರಾದ ಬದ್ದಂಜೆಟ್ಟೀರ ಬಿ. ನಾಣಯ್ಯ, ಬಾಳೆಯಡ ಉತ್ತಪ್ಪ, ನಾಪನೆರವಂಡ ಪೊನ್ನಪ್ಪ, ಕಾರ್ಯದರ್ಶಿ ಮಾಳೆಯಂಡ ದೇವಯ್ಯ, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

- ದುಗ್ಗಳ ಸದಾನಂದ