ಮೂರ್ನಾಡು, ಜು. 5: ವಿಶ್ವ ಹಿಂದೂ ಪರಿಷತ್ ಹೊದ್ದೂರು ಹೋಬಳಿ ಘಟಕದ ವತಿಯಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಶ್ರಮದಾನ ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಶಾಲಾ ಮೈದಾನ ಹಾಗೂ ತೋಟದಲ್ಲಿ ಬೆಳೆದ ಕಾಡುಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಹೊದ್ದೂರು ಹೋಬಳಿ ಸಂಚಾಲಕ ಎಚ್.ಸಿ. ನಂದ, ದಿನೇಶ್, ಜಗದೀಶ್ ಇನ್ನಿತರರು ಪಾಲ್ಗೊಂಡಿದ್ದರು.