ಸೋಮವಾರಪೇಟೆ, ಡಿ. 11: ಇಲ್ಲಿನ ಲಯನ್ಸ್ ಸಂಸ್ಥೆ ಮತ್ತು ಸಂತ ಜೋಸೆಫರ ಪ್ರೌಢಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಜೀವನವೃತ್ತಿ ಮಾರ್ಗದರ್ಶನ ಶಿಬಿರ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್ ಡಾ. ಲೋಹಿತ್ ವೀರಪ್ಪ ಮಾತನಾಡಿ, ಯುವಜನರೇ ದೇಶದ ನಿಜವಾದ ಸಂಪತ್ತು. ದೇಶದ ಆರ್ಥಿಕಾಭಿವೃದ್ಧಿ ಮತ್ತು ದೇಶಸೇವೆಯಲ್ಲಿ ಯುವಜನರ ಪಾತ್ರ ಹಿರಿದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿ ಜೀವನದಲ್ಲೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಹೆಚ್ಚಿನ ಸಮಯ ನೀಡಬೇಕು ಎಂದು ಹೇಳಿದರು.

ಲಯನ್ಸ್ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಲೀಲಾರಾಂ ಮಾತನಾಡಿ, ತಾಯಿ ನಾಡಿನ ಸೇವೆಗಾಗಿ ಪ್ರತಿಯೊಬ್ಬರೂ ಸಿದ್ದರಾಗಿರಬೇಕು. ವಿದ್ಯಾರ್ಥಿಗಳು ದೇಶಸೇವೆ ದೃಷ್ಟಿಯಿಂದ ಸೇನೆಗೆ ಸೇರ್ಪಡೆಗೊಳ್ಳಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಎ.ಎಸ್.ಮಹೇಶ್, ಸಂತ ಜೋಸೆಫರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹ್ಯಾರಿ ಮೋರಸ್, ಲಯನ್ಸ್ ಪದಾಧಿಕಾರಿಗಳಾದ ಕರಿಯಪ್ಪ ರೈ, ಮಂಜುನಾಥ ಚೌಟ, ಮೇಜರ್ ಮಂದಪ್ಪ, ಕೆ.ವಿ.ಗಣೇಶ್, ಪ್ರತಾಪ್ ಈರಪ್ಪ ಮತ್ತಿತರರು ಉಪಸ್ಥಿತರಿದ್ದರು.ಸೋಮವಾರಪೇಟೆ, ಡಿ. 11: ಇಲ್ಲಿನ ಲಯನ್ಸ್ ಸಂಸ್ಥೆ ಮತ್ತು ಸಂತ ಜೋಸೆಫರ ಪ್ರೌಢಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಜೀವನವೃತ್ತಿ ಮಾರ್ಗದರ್ಶನ ಶಿಬಿರ ಶಾಲಾ ಆವರಣದಲ್ಲಿ ನಡೆಯಿತು.