ಗೋಣಿಕೊಪ್ಪಲು, ಸೆ. 1: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಯ್ಕೆಗಾಗಿ ಚುನಾವಣೆ ನಡೆಸಲಾಯಿತು.

ಚುನಾವಣೆ ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಸ್. ಎಸ್. ಮಾದಯ್ಯರವರು “ವಿದ್ಯಾರ್ಥಿಗಳಲ್ಲಿ ರಾಜಕೀಯ ಮನೋಭಾವನೆಯನ್ನು ಮೂಡಿಸುವದು, ನಾಯಕತ್ವ ಗುಣಗಳನ್ನು ಬೆಳೆಸುವದು, ದೇಶ-ವಿದೇಶಗಳ ರಾಜಕೀಯ ಪರಿಸ್ಥಿತಿ ಗಳನ್ನು ಅರಿಯಲು, ಶಿಸ್ತು-ಸಂಯಮದಂತಹ ಭಾವನೆಗಳನ್ನು ಬೆಳೆಸಿಕೊಳ್ಳಲು ಇಂತಹ ಚುನಾವಣೆಗಳು ಅಗತ್ಯ” ಎಂದು ಕರೆ ನೀಡಿದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಹೆಸರು ಇಂತಿವೆ. ಜಂಟಿ ಕಾರ್ಯದರ್ಶಿಗಳಾಗಿ ಕು. ದಿಕ್ಷಿತ್ ವಿಜಯ್‍ಕುಮಾರ್ ಮತ್ತು ಕು. ಗ್ರೀಷ್ಮ ಗಂಗಮ್ಮ ಎಂ.ಸಿ. ಆಯ್ಕೆಯಾದರೆ, ತರಗತಿಯ ಪ್ರತಿನಿಧಿಗಳಾಗಿ ಕು. ಸಚಿನ್ ತಮ್ಮಯ್ಯ ಎಂ.ಎಸ್., ರಶ್ಮಿ ಪಿ.ಎನ್., ದಿನೇಶ ವೈ.ಟಿ., ಋಷಿ ಪಾರ್ವತಿ ಸಿ.ಟಿ., ನಿರಂಜನ್ ಟಿ.ಆರ್., ಯೋಗಲಕ್ಷ್ಮಿ ಎ., ಲಿಖಿತ್ ಎಸ್.ಜೆ., ಗಗನ ವಿ.ಜಿ., ರೋಶನ್ ಗಣಪತಿ ಕೆ.ಡಿ., ಕಾವೇರಿ ಕೆ.ಬಿ., ಅಸ್ಬೀರ್ ಬಿ.ಎ., ಕೃತಿ ಪಿ.ಎಸ್., ಲಾವಣ್ಯ ಎ.ಬಿ., ರುಫೇದ್ ಕೆ.ಎಂ.ಅವರುಗಳು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಕರಾದ ಶ್ರೀಮತಿ ಮೀನಾಕ್ಷಿ ಪಿ.ಸಿ. ಮತ್ತು ಪದ್ಮಾವತಿ ಮಹಾವೀರ್ ಹಾಗೂ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.