ವೀರಾಜಪೇಟೆ, ಜ. 28: ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತ ವಾಲಿಬಾಲ್ ಆಟಗಾರರಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕ್ರೀಡಾ ಸಮಿತಿ ಗಳಿಗೆ ಮಾಹಿತಿ ಕೊರತೆಯಿಂದಾಗಿ ಆಟದ ಪ್ರತಿಭೆಗಳು ವಂಚನೆಗೊಳ ಗಾಗಿದ್ದಾರೆ. ಇದನ್ನು ವಾಲಿಬಾಲ್‍ನ ಉನ್ನತ ಮಟ್ಟದ ಕ್ರೀಡಾ ಸಮಿತಿಗಳು ಪರಿಶೀಲಿಸಿ ಗ್ರಾಮಾಂತರ ಪ್ರದೇಶ ದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ನೀಡಬೇಕಾಗಿದೆ ಎಂದು ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಕೊಂಡಗೇರಿ ಫ್ರೆಂಡ್ಸ್ ವತಿಯಿಂದ ಕೊಂಡಂಗೇರಿಯ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾಲಿಬಾಲ್‍ನ ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಪಕ್ಷದ ಮುಖಂಡರಾದ ಪಿ.ಕುಸುಮ ಕಾರ್ಯಪ್ಪ, ಪಿ.ಎ.ಉಸ್ಮಾನ್, ಹಾಲುಗುಂದ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಎ.ಎಂ.ಸಾದುಲಿ, ಪಿ.ಎ.ಯೂಸುಫ್, ಮೈದು ಕುಂಞ, ಕುಂಞ ಅಹ್ಮದ್, ಪಿ.ಎ.ಮಾಯಿನೆ, ಪುದಿಯೊಕ್ಕಡ ಖಾದರ್, ಕೆ.ಎಂ.ಸಾದುಲಿ ಉಪಸ್ಥಿತರಿದ್ದರು.