ಸುಂಟಿಕೊಪ್ಪ, ಜು. 2: ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿಗೆ ಉತ್ತಮ ರೀತಿಯ ಪೋಷಕಾಂಶಗಳನ್ನು ಬಳಸಬೇಕು. ಹಾಗಿದ್ದಾಗ ಮಾತ್ರ ಮಣ್ಣಿನ ಆರೋಗ್ಯ ಪ್ರಬಲವಾಗುತ್ತದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರಜ್ಞ ಡಾ. ವೀರೇಂದ್ರ ಕುಮಾರ್ ಮಾಹಿತಿ ನೀಡಿದರು.

ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಪಂಚಾಯಿತಿ, ಸುಂಟಿಕೊಪ್ಪ ಕೃಷಿ ಇಲಾಖೆ ವತಿಯಿಂದ ಬೀಜೋಪಚಾರದ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಮತ್ತು ತೋಟಗಾರಿಕಾ ಮಹಾವಿದ್ಯಾಲಯ ಶಿವಮೊಗ್ಗ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಇದರ ವತಿಯಿಂದ ಬೆಳೆ ವಿಚಾರ ಸಂಕಿರಣ, ಗ್ರಾಮೀಣ ಕೃಷಿ, ಅರಣ್ಯ ಕಾರ್ಯಾನುಭವ ಚಟುವಟಿಕಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಭತ್ತವನ್ನು ವಾಣಿಜ್ಯ ಬೆಳೆಯನ್ನಾಗಿ ರೈತರು ಬೆಳೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಭತ್ತವನ್ನು ಊಟದ ಬಳಕೆಗಾದರೂ ಬೆಳೆಯುವಂತೆ ರೈತರಿಗೆ ಕಿವಿಮಾತು ಹೇಳಿದರು.

ತಮ್ಮ ಭೂಮಿಯಲ್ಲಿ ಬಿತ್ತಿದ ಬೀಜಗಳಿಂದ ರೋಗ ಬಂದೊದಗುವ ಸೂಚನೆ ಇರುವದರಿಂದ, ರೈತರು ಕಾಯಿಲೆ ಬರದಂತೆ ಬೀಜೋಪಚಾರ ಮಾಡಬೇಕು.

ಬಿತ್ತನೆ ಬೀಜಗಳನ್ನು ಮೊದಲು ಉಪ್ಪಿನ ದ್ರಾವಣದಿಂದ ಜೊಳ್ಳನ್ನು ತೆಗೆಯಬೇಕು. ಒಂದು ವೇಳೆ ಜೊಳ್ಳು ತೆಗೆಯದೇ ಬಿತ್ತನೆ ಮಾಡಿದರೇ ರೋಗ ಬಂದು ಅದನ್ನು ಗುಣಪಡಿಸಲು ಕಷ್ಟಕರವಾಗುವದರಿಂದ ಮೊದಲೇ ಬೀಜೋಪಚಾರವನ್ನು ಪ್ರತಿಯೊಬ್ಬ ರೈತರು ಮಾಡಲೇಬೇಕು ಎಂದು ಡಾ. ವೀರೇಂದ್ರ ಕುಮಾರ್ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ವಹಿಸಿದ್ದರು.

ವೇದಿಕೆಯಲ್ಲಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಜಡೇಯ ಗೌಡ, ಡಾ. ಕೆಂಚರೆಡ್ಡಿ, ಡಾ. ಹೊಸಗೌಡ, ಡಾ. ಟಿ.ಎಸ್. ಗಣೇಶ್ ಪ್ರಸಾದ್, ಸುಂಟಿಕೊಪ್ಪದ ಕೊಡಗು ನೀಡ್ಸ್‍ನ ಡಾ. ಬಿ.ಸಿ. ನಂಜಪ್ಪ, ಆಲ್ ಇಂಡಿಯಾ ರೇಡಿಯೋದ ಎಸ್. ಸುಬ್ರಮಣ್ಯ, ಪ್ರಗತಿಪರ ರೈತ ವೈ.ಎಂ. ಉಲ್ಲಾಸ್, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ ಕೃಷಿ