ಕೂಡಿಗೆ, ಜು. 2: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾ.ಪಂ ಸದಸ್ಯ ಕೆ.ವೈ. ರವಿ ಸೇರಿದಂತೆ ಸದಸ್ಯರು ಸ್ವಚ್ಛತೆ ಹಾಗೂ ಕರ ವಸೂಲಾತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಗ್ರಾಮ ಪಂಚಾಯಿತಿಗೆ ಬರುವ ಆದಾಯಕ್ಕೆ ಯಾವದೇ ಸಮಸ್ಯೆಯಾಗದಂತೆ ಬರುವ ಆದಾಯವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಒಕ್ಕೊರಲಿನ ತೀರ್ಮಾನದಂತೆ ಕರ ವಸೂಲಿಯನ್ನು ಹೆಚ್ಚಿಸಿ, ವರ್ತಕರ ಅಂಗಡಿಯ ಪರವಾನಿಗೆಯನ್ನು ನವೀಕರಿಸಲು ಗ್ರಾಮ ಪಂಚಾಯಿತಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಸದಸ್ಯರುಗಳ ತೀರ್ಮಾನದಂತೆ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತೆ ಮತ್ತು ಶೌಚಾಲಯಗಳನ್ನು ನಿರ್ಮಾಣಗೊಳಿಸಲು ತುರ್ತುಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಎಲ್ಲಾ ವಾರ್ಡುಗಳ ಬೀದಿ ದೀಪ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಕ್ರಮವಹಿಸಲಾಗುವದು ಎಂದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗಗನ್ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಸ್ವಾಮಿನಾಯಕ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು. ಕೆ.ಸಿ. ರವಿ ಸ್ವಾಗತಿಸಿ, ವಂದಿಸಿದರು.