ಸೋಮವಾರಪೇಟೆ, ಆ. 31: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೇಲೆ ಒಣಗಿದ ಮರ ಬಿದ್ದ ಪರಿಣಾಮ, ಕಾರ್ಮಿಕ ಮಹಿಳೆಯೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದೆ. ಪಟ್ಟಣದ ಸಮೀಪದ ಕರ್ಕಳ್ಳಿ ಗ್ರಾಮದ ಕೈರುನ್ನಿಸ ಗಾಯಗೊಂಡ ಮಹಿಳೆ. ಕಾಫಿ ತೋಟದಲ್ಲಿ ಕಳೆ ತೆಗೆಯುತ್ತಿದ್ದ ಸಂದರ್ಭ ಮರ ಮುರಿದು ಬಿದ್ದಿದ್ದು, ಮಹಿಳೆಯ ಬಲಗಾಲಿನ ಮೂಳೆ ಮುರಿದಿದೆ ಎನ್ನಲಾಗಿದೆ. ಇನ್ನುಳಿದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.