ಸುಂಟಿಕೊಪ್ಪ, ಆ. 31; ವಿವಿಧ ಕಾರ್ಮಿಕರು ಸಂಘಟನೆಗಳು ತಾ. 2 ರಂದು ಅಖಿಲ ಭಾರತ ಕಾರ್ಮಿಕರ ಹೋರಾಟವನ್ನು ನಡೆಸಲಿದ್ದು, ಅದಕ್ಕೂ ಮುನ್ನ ಜಿಲ್ಲೆಯ ಕಾರ್ಮಿಕರ ಬಗ್ಗೆ ಗಮನಹರಿಸಿ ಅಕ್ರಮವಾಗಿ ಕೊಡಗಿನಲ್ಲಿ ನೆಲೆಸಿರುವ ಬಾಂಗ್ಲಾ ವಾಸಿಗಳನ್ನು ತೆರವುಗೊಳಿಸಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ ಮತ್ತು ಉಪಾಧ್ಯಕ್ಷ ಹೆಚ್.ಎನ್. ಮಂಜು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್ ಪೂಜಾರಿ, ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳ ಬೇಡಿಕೆಗಳು ಸಮುಚ್ಚಿತವಾಗಿದ್ದರೂ ಜಿಲ್ಲೆಯ ಕಾರ್ಮಿಕರು ಇನ್ನಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಅಸ್ಸಾಂ ನವರು ಎಂದುಕೊಂಡು ಕೊಡಗಿನ ಕಾಫಿ ತೋಟಗಳಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರಿಂದ ಅಪಾಯ ಎದುರಾಗಲಿದೆ. ಕಡಿಮೆ ವೇತನಕ್ಕೆ ದುಡಿಯುತ್ತಿರುವ ಕೊಡಗಿನ ಕಾರ್ಮಿಕರು ಆನೆ ಹಾವಳಿ ಯಿಂದಲೂ ತತ್ತರಿಸಿಹೋಗಿದ್ದಾರೆ. ಮುಂದೊಂದು ದಿನ ಅಕ್ರಮ ಬಾಂಗ್ಲಾ ವಲಸಿಗರು ಶಾಶ್ವತವಾಗಿ ಇಲ್ಲಿಯೇ ನೆಲೆ ನಿಂತಲ್ಲಿ ಸಮಾಜ ಘಾತಕ ಕೃತ್ಯಗಳು ಹೆಚ್ಚಾಗಲಿದೆ.ಅಲ್ಲದೇ ಸ್ಥಳಿಯ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ನಿರ್ಗತಿಕರಾಗ ಬೇಕಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಯವರು ಭಾರತದ ಗಡಿಯಲ್ಲಿ ಬಾಂಗ್ಲಾ ವಾಸಿಗಳ ಅಕ್ರಮ ವಲಸೆಗಾರರನ್ನು ತಡೆಗಟ್ಟಲು ಶ್ರಮಿಸುತ್ತಿದ್ದರೂ ಕೊಡಗಿನಲ್ಲಿ ಕೆಲವು ಏಜೆಂಟರುಗಳ ಮುಖಾಂತರ ಇಲ್ಲಿ ರಾಜಾರೋಷವಾಗಿ ನೆಲೆಸುತ್ತಿದ್ದಾರೆ. ಈ ಬಗ್ಗೆ ದ್ವನಿಯೆತ್ತದ ಕಾರ್ಮಿಕ ಸಂಘಟನೆಗಳು ಕೇವಲ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಕರೆ ನೀಡಿರುವದು ಎಷ್ಟು ಸಮಂಜಸ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರ ಬಳಗ ಈ ಸಂದರ್ಭದಲ್ಲಿ ಪ್ರಶ್ನಿಸಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಕಾರ್ಮಿಕರಿಗೆ ಯಾವದೇ ರಕ್ಷಣೆಯಾಗಲಿ, ಸೌಲಭ್ಯ ವಾಗಲಿ ದೊರಕದೇ ಇರುವದು ವಿಷಾದÀನೀಯ ಎಂದರಲ್ಲದೇ ಬಾಂಗ್ಲಾಗಳು ಎಲ್ಲ ರಂಗದಲ್ಲೂ ಕಾರ್ಯಪ್ರವೃತ್ತರಾಗಿದ್ದು, ಮುಂದೆ ಕೊಡಗಿನ ಜನರಿಗೆ ಅಪಾಯ ಕಟ್ಟ್ಟಿಟ್ಟ ಬುತ್ತಿ ಎಂದು ಕರಾವೇ ಉಪಾಧ್ಯಕ್ಷ ಮಂಜು ಹೇಳಿದರು.