ಮಡಿಕೇರಿ, ಸೆ. 15: ಜನ ಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಭ್ರಷ್ಟಾಚಾರವನ್ನು ಸಮರ್ಥವಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಂಘಟನೆ ಮತ್ತು ಅಭಿಯಾನ’ ರಾಜ್ಯವ್ಯಾಪಿ ಮಾಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಂ.ಎಸ್. ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸಂಘಟನೆಯ ಘಟಕವನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸಿ, ಲಂಚ ಮತ್ತು ಭ್ರಷ್ಟಾಚಾರದ ಯಾವದೇ ವಿಚಾರವನ್ನು ಮೊ. 8884277730 ಮೂಲಕ ತಮಗೆ ತಿಳಿಸಿದಲ್ಲಿ, ಅಗತ್ಯ ಸಹಕಾರ ನೀಡುವದರೊಂದಿಗೆ ಹೋರಾಟವನ್ನು ರೂಪಿಸುವದಾಗಿ ಸ್ಪಷ್ಟಪಡಿಸಿದರು.
ಲಂಚ ಮತ್ತು ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಸುಳಿವು ದೊರೆತಲ್ಲಿ ಸಂಘÀಟನೆಯ ಮುಖೇನ ‘ಕುಟುಕು’ ಕಾರ್ಯಾಚರಣೆ ಮಾಡುವ ಮೂಲಕ ಭ್ರಷ್ಟ ವ್ಯವಸ್ಥೆಯನ್ನು ಬೆಳಕಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಯಾವದೇ ಪ್ರಯತ್ನಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಹೋರಾಟಕ್ಕೂ ಸಂಘಟನೆ ಸದಾ ಸಿದ್ಧವಿರುತ್ತದೆ ಎಂದರು.
‘ಸಕಾಲ’ದಂತಹ ಯೋಜನೆಗಳ ಬಗ್ಗೆ ಅಗತ್ಯ ಪ್ರಚಾರ ಇಲ್ಲದಿರುವದರಿಂದ ಭ್ರಷ್ಟ ಅಧಿಕಾರಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಂತೆಯೆ ಮಾಹಿತಿ ಹಕ್ಕು ಕಾಯ್ದೆಯೂ ಅತ್ಯಂತ ಉಪಯುಕ್ತವಾದುದಾಗಿದ್ದು, ಇವುಗಳ ಬಗ್ಗೆ ಸಂಘÀಟನೆ ಮುಖೇನ ಮಾಹಿತಿ, ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರವಿ ಕೃಷ್ಣಾರೆಡ್ಡಿ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಆ. 6 ರಂದು ಆರಂಭಗೊಂಡಿರುವ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯದ ವಿವಿಧೆಡೆಗಳಲ್ಲಿ ಲಂಚ ಮುಕ್ತ ಅಭಿಯಾನವನ್ನು ರಾಜ್ಯದ ವಿವಿಧೆಡೆಗಳಲ್ಲಿ ನಡೆಸಿಕೊಂಡು ಬರುತ್ತಿದೆ ಎಂದರು.
ಸಂಘÀಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ಸಂಘಟನೆಯಿಂದ ಜನ ಜಾಗೃತಿ ಮಾತ್ರವಲ್ಲ ಕುಟುಕು ಕಾರ್ಯಾಚರಣೆÉಯ ಮೂಲಕ ಭ್ರಷ್ಟಾಚಾರವನ್ನು ಬಯಲಿಗೆಳೆÉಯಲಾಗುತ್ತಿದ್ದು, ಇದಕ್ಕಾಗಿ ತಂಡವನ್ನು ರಚಿಸಿಕೊಂಡಿದ್ದೇವೆ. ಯಾವದೇ ಕುಟುಕು ಕಾರ್ಯಾಚÀಣೆÉಗೂ ಮುನ್ನ ಸಮೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಕೊಡಗಿನಲ್ಲಿ ಕಂದಾಯ ಜಾಗಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಜನರು ಎದುರಿಸುತ್ತಿರುವದರ ಬಗ್ಗೆ ಮಾಹಿತಿ ಇದೆ. ನ್ಯಾಯಬದ್ಧವಾದ ಸರಕಾರಿ ಸೇವೆಯನ್ನು ಜನರಿಗೆ ನೀಡಲು ಲಂಚ ಸ್ವೀಕರಿಸುವ ಮಂದಿಯ ವಿರುದ್ಧ ಕಾನೂನು ಹೋರಾಟ ನಡೆಸುವದಾಗಿ ಹೇಳಿದರು.