ಚೆಟ್ಟಳ್ಳಿ, ಡಿ. 25: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೊಳ್ಳರಿಮಾಡು ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಮಂದ್ ತೊರ್‍ಪÀ ಹಾಗೂ ಆಟ್ ಪಾಟ್ ಸಮಾರೋಪ ಸಮಾರಂಭ ಬೊಳ್ಳರಿಮಾಡ್ ಊರ್‍ಮಂದ್‍ನಲ್ಲಿ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೊಳ್ಳರಿಮಾಡ್ ಊರ್‍ತಕ್ಕ ಪುಟ್ಟಿಚಂಡ ಮುತ್ತಪ್ಪ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಕೊಡವರ ಆಚಾರ-ವಿಚಾರ ಉಳಿಯ ಬೇಕೆಂದರೆ ಮಂದ್ ಮಾದಿಯನ್ನು ಉಳಿಸಲೇಬೇಕು ಎಂದರು.

ಗದ್ದೆ ಮಾಡುವದು ಕೊಡವರ ಸಾಂಸ್ಕ್ರತಿಯ ಒಂದು ಭಾಗವಾಗಿದೆಂದು ಜಿಲ್ಲಾ ಪಂಚಾಯಿತಿ ಸ್ಥಾನೀಯ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು. ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಂಡ ಸ್ಮಿತಾ ಪ್ರಕಾಶ್, ಬೊಳ್ಳರಿಮಾಡ್ ಭದ್ರಕಾಳಿ ದೇವಾಲಯದ ಅಧ್ಯಕ್ಷ ಪುಟ್ಟಿಚಂಡ ಅಯ್ಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ತಾತಂಡ ಬಿಪಿನ್ ವೇದಿಕೆಯಲ್ಲಿದ್ದರು. ಮಂದ್‍ನ ಪ್ರಾಮುಖ್ಯತೆ ಎಂಬ ಬಗ್ಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ.ಬಿದ್ದಂಡ ರೇಖಾಸುಬ್ಬಯ್ಯ ವಿಚಾರ ಮಂಡನೆ ಮಾಡಿದರು.

ಮುಂಡಚಾಡಿರÀ ರೆನ್ನಿ ಮತ್ತು ತಂಡದಿಂದ ಸ್ವಾಗತ ನ್ರತ್ಯ, ಉಮ್ಮತ್ತಾಟ್, ಬೊಳ್ಳರಿಮಾಡ್ ಗ್ರಾಮಸ್ಥರ ತಂಡದಿಂದ ಬೊಳಕಾಟ್, ಕೋಲಾಟ್ , ರಾಜ್ಯ ಜಾನಪದ ಪ್ರಶಸ್ತಿ ವಿಜೇತೆ ಕುಡಿಯರ ಶಾರದಾ ತಂಡದಿಂದ ಉರ್‍ಟಿಕೊಟ್ಟ್ ಆಟ್ ಎರವಾಟ್ ಪ್ರದರ್ಶನ, ಕಸ್ತೂರಿ ಮೊಣ್ಣಪ್ಪರವರು ಕೊಡವ ಹಾಡನ್ನು ಹಾಡಿದರು.

ಪುಟ್ಟಿಚಂಡ ಎಂ ಮುದ್ದಪ್ಪ ಸ್ವಾಗತಿಸಿ, ನಿರೂಪಿಸಿದರು. ಪುಟ್ಟಿಚಂಡ ನರೇಂದ್ರ, ನವೀನ್, ಗಣಪತಿ, ಪಟ್ರಪಂಡ ಜಗದೀಶ್, ಅಚ್ಚಪ್ಪ, ಅಮ್ಮೆಯಂಡ ಕಾಶಿ, ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.