ವೀರಾಜಪೇಟೆ, ಡಿ, 25: ವಿದ್ಯಾರ್ಥಿಗಳು ಜಾಗೃತರಾಗಿ ಅಪಾಯಕಾರಿ ಹೆಚ್‍ಐವಿ ಏಡ್ಸ್ ಕಾಯಿಲೆಯನ್ನು ತಡೆಗಟ್ಟಲು ನಿರಂತರ ಹೋರಾಟ ನಡೆಸುವದರೊಂದಿಗೆ ಏಡ್ಸ್ ಕಾಯಿಲೆಗ ತುತ್ತಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತ ಪ್ರಯತ್ನ ಮಾಡಬೆಕಾಗಿದೆ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶÀ ಟಿ.ಎಂ. ನಾಗರಾಜು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ವೀರಾಜಪೇಟೆ ವಕೀಲರ ಸಂಘ, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಅಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹೆಚ್‍ಐವಿ ಏಡ್ಸ್ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಏಡ್ಸ್ ಸೋಂಕಿನ ಬಗ್ಗೆ ಯುವಕ-ಯುವತಿಯರು ಎಚ್ಚರ ವಹಿಸಬೇಕು ಹಾಗೂ ಅಕ್ಕ-ಪಕ್ಕದವರಿಗೂ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ. ವಿಶ್ವನಾಥ್ ಸಿಂಪಿ ಮಾತನಾಡಿ, ಹೆಚ್‍ಐವಿ ಸೋಂಕು ಅಮೇರಿಕಾದಲ್ಲಿ ಹುಟ್ಟಿ ನಂತರ ಎಲಾ ್ಲಕಡೆ ಹರಡ ತೊಡಗಿತು. ಏಡ್ಸ್ ಸೋಂಕು ತಗುಲಿದವರಿಗೆ ಮೊದಲಿಗೆ ಸುಸ್ತಾಗುತ್ತದೆ ನಂತರ ವಾಂತಿ-ಜ್ವರ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭ ಕೂಡಲೇ ವೈದÀ್ಯರನ್ನು ಸಂಪರ್ಕಿಸಿ ಉಚಿತವಾಗಿ ಪರೀಕ್ಷೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳ ಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಮೊದಲೇ ಎಚ್ಚೆತ್ತುಕೊಂಡು ದುಶ್ಚಟದಿಂದ ದೂರವಿರಬೇಕು. ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕೆಂದರು.

ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಮಾತನಾಡಿ, ಏಡ್ಸ್ ತಡೆಗಟ್ಟಲು ಸಾಧ್ಯ. ಅದಕ್ಕೆ ಸಾಮಾನ್ಯ ಜ್ಞಾನ ಅಗತ್ಯ. ಇದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವಂತಾಗಬೇಕು ಎಂದರು. ವಕೀಲ ಕೆ.ವಿ. ಸುನಿಲ್ ಅವರು ಹೆಚ್‍ಐವಿ ಬಗ್ಗೆ ಕಾನೂನು ಅರಿವು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಕೆ. ಸರಸ್ವತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಪ್ರೊ. ಕೆ. ಬಸವರಾಜು ಸ್ವಾಗತಿಸಿ, ವಿದ್ಯಾರ್ಥಿಗಳಾದ ಆರ್. ಸುಪ್ರಿತ ಮತ್ತು ಝಾನ್ಸಿ ನಿರೂಪಿಸಿದರೆ, ಯೋಗಿತ ವಂದಿಸಿದರು.