ಗೋಣಿಕೊಪ್ಪಲು, ಜ. 29: ಕಾವೇರಿ ಕಾಲೇಜಿನ ಇತಿಹಾಸ ವಿಭಾಗದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳಾದ ಅಶೋಧಿನಿ, ಅಂಜನಾ ಕಾರ್ಯಪ್ಪ ಅವರ ಜೀವನ ಚರಿತ್ರೆ ಬಗ್ಗೆ ಮಾಹಿತಿ ನೀಡಿದರು. ಚನ್ನನಾಯಕ ಕಾರ್ಯಪ್ಪ ಅವರ ಜೀವನಘಾತೆಯನ್ನು ಕಿರು ಚಿತ್ರದ ಮೂಲಕ ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಎಸ್.ಪಿ. ಮುಕ್ಕಾಟಿರ ಅಪ್ಪಯ್ಯ ಭಾಗವಹಿಸಿದ್ದರು. ಈ ಸಂದರ್ಭ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಇತಿಹಾಸ ವಿಭಾಗದ ಮುಖ್ಯಸ್ಥೆ ಪಿ.ಸಿ. ಮೀನಾಕ್ಷಿ ಹಾಗೂ ಉಪನ್ಯಾಸಕಿ ಸೀಮಾ ಉಪಸ್ಥಿತರಿದ್ದರು. ಭರತ್ ಹಾಗೂ ಶುಭ ನಿರೂಪಿಸಿದರು.