ಮಡಿಕೇರಿ, ಆ. 15: ಮಡಿಕೇರಿ ಫಿüೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಪ್ರಾಂಶುಪಾಲರಾದ ಡಾ.ಪಾರ್ವತಿ ಅಪ್ಪಯ್ಯ ಅವರು ಪೋಲ್ಯಾಂಡ್‍ನ ಪೋಜ್‍ನಾನ್‍ನಲ್ಲಿ ಜುಲೈ 22 ರಿಂದ ಜುಲೈ 28ರವರೆಗೆ ನಡೆದ 24ನೇ ರಾಜ್ಯಶಾಸ್ತ್ರ ವಿಶ್ವ ಕಾಂಗ್ರೆಸ್‍ನಲ್ಲಿ ಭಾಗವಹಿಸಿ “ಉeಟಿಜeಡಿ ಕಿuoಣಚಿs iಟಿ Iಟಿಜiಚಿ- ಊisಣoಡಿiಛಿಚಿಟ ಆisಛಿouಡಿse oಟಿ ಇquಚಿಟiಣಥಿ ಚಿಟಿಜ Iಟಿequಚಿಟiಣಥಿ’’ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿದ್ದಾರೆ. ವಿದೇಶದಲ್ಲಿ ಮಂಡಿಸಿದ ಪ್ರಬಂಧ ಗಳಲ್ಲಿ ಇದು ಐದನೇ ಪ್ರಬಂಧ. ಇವರು ಈಗಾಗಲೇ ಕೆನಡಾದ ಮೋಂಟ್ರಿಲ್ ಹಾಗೂ ಒಟ್ಟಾವ, ಸ್ಪೇನ್‍ನ ಮೇಡ್ರಿಡ್, ಆಸ್ಟ್ರೇಲಿಯಾದ ಬ್ರಿಸ್‍ಬೇನ್‍ಲ್ಲಿ ಪ್ರಬಂಧಗಳನ್ನು ವಿಶ್ವ ಸಮ್ಮೇಳನಗಳಲ್ಲಿ ಮಂಡಿಸಿದ್ದಾರೆ.