ಸೋಮವಾರಪೇಟೆ, ಆ. 15: ಶಾಸಕರ ಅನುದಾನ ಸೇರಿದಂತೆ ಜಿ.ಪಂ. ಹಾಗೂ ಗ್ರಾ.ಪಂ.ನ 14ನೇ ಹಣಕಾಸು ಯೋಜನೆಯಡಿ ರೂ. 6 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೇಳೂರು ಗ್ರಾಮ ಪಂಚಾಯಿತಿಯ ನಗರೂರು ಲಿಂಕ್ ರಸ್ತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.ರಸ್ತೆಗಳು ಗ್ರಾಮದ ಅಭಿವೃದ್ಧಿಯ ಸಂಕೇತಗಳಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭ ಗ್ರಾಮಸ್ಥರು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿಸಿಕೊಳ್ಳಬೇಕು. ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳು ಯಾವದೇ ಕಾರಣಕ್ಕೂ ಕಳಪೆಯಾಗಬಾರದು. ಕಳಪೆ ಎಂದು ಕಂಡುಬಂದಲ್ಲಿ ತಕ್ಷಣ ಕೆಲಸ ಸ್ಥಗಿತಗೊಳಿಸಿ ತನಗೆ ಮಾಹಿತಿ ನೀಡಬೇಕು ಎಂದು ರಂಜನ್ ಹೇಳಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯ ಸತೀಶ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಸದಸ್ಯ ಯಾಕೂಬ್, ಯೋಗೇಂದ್ರ, ಹರೀಶ್, ಮಾಜಿ ಅಧ್ಯಕ್ಷ ಸ್ಟ್ಯಾನಿ ರೊಜಾರಿಯೋ, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಓಎಲ್‍ವಿ ಚರ್ಚ್‍ನ ಧರ್ಮ ಗುರು ಸಿ. ರಾಯಪ್ಪ, ಜೋಸೆಫ್ ಕಾಲೇಜು ಪ್ರಾಂಶುಪಾಲ ವಿನ್ಸೆಂಟ್ ಮೊಂಥೆರೋ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.