ಶನಿವಾರಸಂತೆ, ಸೆ. 13: ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾನಪದ ನೃತ್ಯ ಸ್ಪರ್ಧೆಯಲ್ಲಿ (1-4ನೇ ತರಗತಿ) ನಿಡ್ತ ಸ.ಮಾ.ಪ್ರಾ. ಶಾಲೆಯ ಸಿಂಚನಾ, ಚಿತ್ರಾ, ಸಾನಿಕಾ, ಪೂರ್ವಿ, ಎನ್.ಎಚ್. ಸಾನಿಕಾ ಹಾಗೂ ಕಾವ್ಯ ಪ್ರಥಮ ಸ್ಥಾನ ಗಳಿಸಿದ್ದಾರೆ.
5-7ನೇ ತರಗತಿಯ ವಿಭಾಗದಲ್ಲಿ ನಿಡ್ತ ಸ.ಮಾ.ಪ್ರಾ.ಶಾಲೆಯ ಮಾನ್ಯ, ತೃಪ್ತಿ, ರಂಜಿತಾ, ಸುಶ್ಮಿತಾ, ದೀಪಿಕಾ ಹಾಗೂ ಸ್ಫೂರ್ತಿ ಪ್ರಥಮ ಸ್ಥಾನ ಗಳಿಸಿ ಆಯ್ಕೆಯಾಗಿದ್ದಾರೆ.
ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ 1-4ನೇ ವಿಭಾಗದಲ್ಲಿ ಮೂದರವಳ್ಳಿ ಸ.ಹಿ. ಪ್ರಾ.ಶಾಲೆ ‘ಎ'ಯ ಸಿಂಚನಾ, ವಿಲಾಸ, ಶೋಭಿತಾ, ನವ್ಯ, ರಕ್ಷಾ, ವರ್ಷ ಆಯ್ಕೆಯಾಗಿದ್ದಾರೆ. 5-7ನೇ ವಿಭಾಗದಲ್ಲಿ ನಿಡ್ತ ಸ.ಮಾ.ಪ್ರಾ.ಶಾಲೆಯ ರಂಜಿತಾ, ಕಿಶನ್, ರಕ್ಷಿತ್, ಕಾವ್ಯ, ಕಾವೇರಿ, ದೀಪಿಕಾ ಆಯ್ಕೆಯಾಗಿದ್ದಾರೆ.
ಕೋಲಾಟ ಸ್ಪರ್ಧೆಯ 1-4ನೇ ವಿಭಾಗದಲ್ಲಿ ಹಾರೆಹೊಸೂರು ಶಾಲೆಯ ನಿಖಿಲ್, ಸೋನಾ, ಕಾಂಚನಾ, ಪುಣ್ಯ, ಡೀಲಾಕ್ಷ, ವಿಕಾಸ್ ಆಯ್ಕೆಯಾಗಿದ್ದಾರೆ. 5-7ನೇ ವಿಭಾಗದಲ್ಲಿ ಅಕ್ಷಿತಾ, ಆಕ್ಷತಾ, ಶಶಾಂಕ್, ಕೌಶಿಕ್, ಸ್ನೇಹ, ಮಾಲತೇಶ್ ಆಯ್ಕೆಯಾಗಿದ್ದಾರೆ.
ಕ್ವಿಜ್ ಸ್ಪರ್ಧೆಯಲ್ಲಿ 5-7ನೇ ವಿಭಾಗದಲ್ಲಿ ನಿಡ್ತ ಸ.ಮಾ.ಪ್ರಾ.ಶಾಲೆಯ ಕಿಶನ್, ಮಾನ್ಯ, ಅಕ್ಷತಾ, ರಕ್ಷಿತ್, ದೀಪಿಕಾ, ಪ್ರಶಾಂತ್ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗ
ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ 1-4ನೇ ವಿಭಾಗದಲ್ಲಿ ಕಿತ್ತೂರು ಸ.ಕಿ.ಪ್ರಾ.ಶಾಲೆಯ ಕೆ.ವಿ. ಭವಾನಿ, 5-7ನೇ ವಿಭಾಗದಲ್ಲಿ ಮೂದರವಳ್ಳಿ ಸ.ಹಿ.ಪ್ರಾ.ಶಾಲೆ ‘ಎ'ನ ಟಿ.ಎಚ್. ಸಿಂಚನಾ ಆಯ್ಕೆಯಾಗಿದ್ದಾರೆ.
ಇಂಗ್ಲಿಷ್ ಕಂಠಪಾಠ ಸ್ಪರ್ಧೆಯ 1-4ನೇ ವಿಭಾಗದಲ್ಲಿ ನಿಡ್ತ ಶಾಲೆಯ ಸಾನಿಕ, 5-7ರ ವಿಭಾಗದಲ್ಲಿ ಅಕ್ಷತಾ ಆಯ್ಕೆಯಾಗಿದ್ದಾರೆ.
ಹಿಂದಿ ಕಂಠಪಾಠ ಸ್ಪರ್ರ್ಧೆಯಲ್ಲಿ 5-7ನೇ ವಿಭಾಗದಲ್ಲಿ ಗೋಪಾಲಪುರ ಶಾಲೆಯ ಜಿ.ಆರ್. ಮಿಥುನ್ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. 1-4ನೇ ವಿಭಾಗದ ಧಾರ್ಮಿಕ ಪಠಣ (ಸಂಸ್ಕøತ) ಸ್ಪರ್ಧೆಯಲ್ಲಿ ನಿಡ್ತ ಶಾಲೆಯ ಜಿ.ಎಸ್. ಸಿಂಚನಾ ಪ್ರಥಮ ಹಾಗೂ 5-7ನೇ ವಿಭಾಗದಲ್ಲಿ ಕಿತ್ತೂರು ಶಾಲೆಯ ಬಿ.ಎಸ್. ಜ್ಞಾನೇಶ್ವರಿ ಆಯ್ಕೆಯಾಗಿದ್ದಾರೆ.
ಲಘು ಸಂಗೀತ 1-4ನೇ ವಿಭಾಗದಲ್ಲಿ ನಿಡ್ತ ಶಾಲೆಯ ಸಾನಿಕ, 5-7ನೇ ವಿಭಾಗದಲ್ಲಿ ದೀಪಿಕಾ ಆಯ್ಕೆಯಾಗಿದ್ದಾರೆ. ಛದ್ಮವೇಷ ಸ್ಪರ್ಧೆಯ 1-4ನೇ ವಿಭಾಗದಲ್ಲಿ ಹಂಡ್ಲಿ ಶಾಲೆಯ ಭಗತ್, 5-7 ನೇ ವಿಭಾಗದಲ್ಲಿ ಮೂದರವಳ್ಳಿ ಶಾಲೆಯ ಯಶವಂತ್ ಆಯ್ಕೆಯಾಗಿದ್ದಾರೆ.
ಚಿತ್ರಕಲಾ ಸ್ಪರ್ಧೆಯಲ್ಲಿ (1-4) ಮೂದರವಳ್ಳಿ ‘ಎ' ಶಾಲೆಯ ಟಿ.ಎಲ್. ವರ್ಷಾ, (5-7) ಹಂಡ್ಲಿ ಶಾಲೆಯ ಹೆಚ್.ಜಿ. ವಿನಯ್ ಆಯ್ಕೆಯಾಗಿದ್ದಾರೆ. ಕಥೆ ಹೇಳುವ ಸ್ಪರ್ಧೆಯಲ್ಲಿ (1-4) ಕಿತ್ತೂರು ಶಾಲೆಯ ಕೆ.ಡಿ. ಕವನ ಹಾಗೂ ಜ್ಞಾನೇಶ್ವರಿ, ಅಭಿನಯ ಗೀತೆ ಸ್ಪರ್ಧೆಯಲ್ಲಿ ನಿಡ್ತ ಶಾಲೆಯ ಸಿಂಚನಾಮ ಕಿತ್ತೂರು ಶಾಲೆಯ ಜ್ಞಾನೇಶ್ವರಿ ಆಯ್ಕೆಯಾಗಿದ್ದಾರೆ. ಕ್ಲೆ- ಮಾಡಲಿಂಗ್ ಸ್ಪರ್ಧೆಯಲ್ಲಿ (1-4) ಮುಳ್ಳೂರು ಶಾಲೆಯ ಜೀವನ್, (5-7) ನಿಡ್ತ ಶಾಲೆಯ ಎಂ.ಟಿ. ಕಾರ್ತಿಕ್ ಆಯ್ಕೆಯಾಗಿದ್ದಾರೆ. ಭಕ್ತಿಗೀತೆಯ ಸ್ಪರ್ಧೆಯಲ್ಲಿ (1-4) ನಿಡ್ತ ಶಾಲೆಯ ಎನ್.ಎಂ. ಸಾನಿಕಾ, (5-7) ಎನ್.ಆರ್. ದೀಪಿಕಾ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ (1-4) ಕಿತ್ತೂರು ಶಾಲೆಯ ಜ್ಞಾನೇಶ್ ಹಾಗೂ (5-7) ಹಂಡ್ಲಿ ಶಾಲೆಯ ಸಿ.ಎಸ್. ಪ್ರವೀಣ್ ಆಯ್ಕೆಯಾಗಿದ್ದಾರೆ ಎಂದು ಹಂಡ್ಲಿ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಮಧುಕುಮಾರ್ ತಿಳಿಸಿದ್ದಾರೆ.