ಸೋಮವಾರಪೇಟೆ,ಡಿ.2: ಇಲ್ಲಿನ ನ್ಯಾಯಾಲಯ ಆವರಣದಲ್ಲಿ ವಿದ್ವಂಸಕ ಕೃತ್ಯ ತಪಾಸಣಾ ಪತ್ತೆದಳ ಮತ್ತು ಶ್ವಾನ ದಳ ತಪಾಸಣೆ ನಡೆಸಿತು.

ಇತ್ತೀಚೆಗೆ ಮೈಸೂರಿನ ನ್ಯಾಯಾಲಯ ಆವರಣದಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಪಾಸಣೆ ನಡೆಸುವಂತೆ ವರಿಷ್ಠಾಧಿಕಾರಿ ಗಳು ಆದೇಶಿಸಿದ್ದು, ಅದರಂತೆ ತಪಾಸಣೆ ಮಾಡಲಾಗುತ್ತಿದೆ.

ನ್ಯಾಯಾಲಯದ ಆವರಣದ ಹೊರ ಹಾಗೂ ಒಳ ಆವರಣದಲ್ಲಿ ನಿಲ್ಲಿಸಿರುವ ವಾಹನ, ನ್ಯಾಯಾಲಯದಲ್ಲಿನ ಸಾರ್ವಜನಿಕ ಶೌಚಾಲಯ ಸೇರಿದಂತೆ ಇತರೆಡೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ದಳದ ಮುಖ್ಯ ಪೇದೆ ನಿಂಗಪ್ಪ ತಿಳಿಸಿದರು. ಸಿಬ್ಬಂದಿಗಳಾದ ಸುಕುಮಾರ್, ಅನಿಲ್‍ಕುಮಾರ್, ರಾಜೇಶ್ ಅವರುಗಳು ಶ್ವಾನ ದಳದ ರ್ಯಾಂಬೋನೊಂದಿಗೆ ತಪಾಸಣೆ ನಡೆಸಿದರು.