ಸೋಮವಾರಪೇಟೆ, ಜೂ. 19:
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾಲೇಜಿನ ಉಪನ್ಯಾಸಕಿ ಅನುಪಮ ಅವರು, ವಿದ್ಯಾರ್ಥಿಗಳು ಮಾನಸಿಕವಾಗಿ ಸಬಲರಾಗಬೇಕು ಆಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತರಾಗಬಹುದು. ವಿದ್ಯೆ ಅಮೂಲ್ಯವಾದುದು, ಸಂಪೂರ್ಣ ಜ್ಞಾನಗಳಿಸದೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಶ್ರದ್ಧೆ ಹಾಗೂ ನಿಷ್ಠೆಯಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಭವ್ಯ ಭಾರತದ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ. ಇಂದು ಸರ್ಕಾರಗಳು ಸಾಮಾಜಿಕ ಸುಧಾರಣೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ. ಕೇಂದ್ರ ಸರ್ಕಾರದ ಜನ್-ಧನ್, ಸುಕನ್ಯಾ ಸಮೃದ್ದಿ, ಸುರಕ್ಷಾ ವಿಮಾ ಯೋಜನೆ, ನೆರೆಹೊರೆ ಯುವ ಸಂಸತ್ತು, ಪೆನ್ಷನ್ ಯೋಜನೆ ಮುಂತಾದವುಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವರಿಕೆ ಮಾಡಬೇಕೆಂದರು.
ಮತ್ತೋರ್ವ ಅತಿಥಿ ಆರ್ಟ್ ಆಫ್ ಲಿವಿಂಗ್ನ ರಾಗಿಣಿ ಮಾತನಾಡಿ, ಭಾರತೀಯ ಸಂಸ್ಕøತಿಯ ಪ್ರತೀಕವಾಗಿರುವ ಯೋಗದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಬೇಕಾಗಿದೆ. ದೈಹಿಕ ಸ್ಥಿರತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದ ಅವರು, ತಾ. 21 ರಂದು ಆರ್ಟ್ ಆಫ್ ಲಿವಿಂಗ್ ವತಿಯಿಂದ ನಗರದ ಮಾನಸ ಸಭಾಂಗಣದಲ್ಲಿ ಬೆಳಿಗ್ಗೆ 6.30 ರಿಂದ 7.30 ರವರೆಗೆ ನಡೆಯುವ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಬಿ.ಟಿ.ಸಿ.ಜಿ. ಕಾಲೇಜಿನ ಪ್ರಾಂಶ್ರಪಾಲ ಬಾಲಕೃಷ್ಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹೇಶ್, ಚಂದ್ರಿಕ ಹಾಗೂ ಚಂದ್ರಕಲಾ ಅವರ ಗಾಯನ ಕಾರ್ಯಕ್ರಮ ರಂಜಿಸಿತು. ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ವೀಣಾ ಮಂಜಪ್ಪ ನಿರೂಪಿಸಿ, ಉಪಾಧ್ಯಕ್ಷ ಹರೀಶ್ ಸ್ವಾಗತಿಸಿದರು, ಸದಸ್ಯ ಕುಶಾಲಪ್ಪ ವಂದಿಸಿದರು.