ಗುಡ್ಡೆಹೊಸೂರು, ಜು. 5: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಎಂ.ಬಿ. ಉಮಾದೇವಿ ಅವರನ್ನು ಶಾಲೆಯ ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕರ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಬಿ.ಎಸ್. ಲೋಕೆಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಬ್ಬರ್ ಭಾಷಾ, ಉಪಾಧ್ಯಕ್ಷೆ ಪೊನ್ನಮ್ಮ (ರೂಪ), ಸದಸ್ಯರು, ಮಾಜಿ ಸೈನಿಕ ಸೋಮಪ್ಪಮ, ಶಾಲೆಯ ಶಿಕ್ಷಕರಾದ ಆದರ್ಶ, ಗೀತಾ, ರಮ್ಲತ್ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
- ಗಣೇಶ್ ಕುಡೆಕ್ಕಲ್.