ಮಡಿಕೇರಿ, ಡಿ. 19: ಚಿಣ್ಣರ ವನದರ್ಶನ ಕಾರ್ಯಕ್ರಮದ ಅಂಗವಾಗಿ ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಗರಹೊಳೆ ಅಭಯಾರಣ್ಯಕ್ಕೆ ಶಿಕ್ಷಕರೊಂದಿಗೆ ತೆರಳಿದ್ದರು.

ವಿದ್ಯಾರ್ಥಿಗಳಿಗೆ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಪ್ರಾಣಿ, ಪಕ್ಷಿ, ಗಿಡ-ಮರ ಪ್ರಭೇದಗಳ ಅರಿವು ಮೂಡಿಸಿದರು. ಉರಗದ ಸಮಗ್ರ ಮಾಹಿತಿ ಒಳಗೊಂಡ ವೀಡಿಯೋ ಪ್ರದರ್ಶನದ ಮೂಲಕ ತಿಳುವಳಿಕೆ ನೀಡಿದರು.

ಪರಿಸರ ಸಮತೋಲನ, ಪ್ರಾಣಿಗಳ ಪಾತ್ರ ಇವುಗಳ ಬಗ್ಗೆ ತಿಳಿಸಿದರು. ವನ್ಯಜೀವಿಗಳ ದರ್ಶನಕ್ಕೆ ಅನುವು ಮಾಡಿಕೊಟ್ಟರು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ಆರ್.ಎಸ್. ಚಹ್ವಾಣ್, ಹಿಂದಿ ಶಿಕ್ಷಕ ವಿ.ಆರ್. ಪ್ರಸನ್ನ ಹಾಗೂ ಎಂ.ಎಸ್. ಜೀವನ್ ಭಾಗಿಯಾಗಿದ್ದರು.