ವೀರಾಜಪೇಟೆ, ಆ. 21: ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ನ ಧರ್ಮಗುರುಗಳೂ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕರೂ ಆದ ಡಾ. ರೆ.ಫಾ. ಆರೋಗ್ಯ ಸ್ವಾಮಿ ವೀರಾಜಪೇಟೆಯ 6 ವರ್ಷಗಳ ಸೇವೆಯನ್ನು ಮುಗಿಸಿ ಕೆ.ಆರ್. ನಗರದ ಡೋರನಹಳ್ಳಿಯ ಸಂತ ಅಂತೋಣಿ ಸಂಸ್ಥೆಗೆ ವರ್ಗಾವಣೆ ಹೊಂದಿದ ಹಿನ್ನೆಲೆಯಲ್ಲಿ ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಯ ಪಾಲಕ-ಪೋಷಕ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಸಂಘದ ಕಾರ್ಯದರ್ಶಿ ಚಾಲ್ರ್ಸ್ ಡಿಸೋಜ ಶಿಕ್ಷಕ ಪ್ರತಿನಿಧಿಗಳಾದ ಜಫ್ರಿ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ಫಾ. ಟೆನಿ ಕುರಿಯನ್ , ಸಂಘದ ಉಪಾಧ್ಯಕ್ಷೆ ಆಶಾ ಸುಬ್ಬಯ್ಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೆಟ್ ಲೆಸ್ರಾದೋ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆನ್ನಟ್ ಸಿಸ್ಟರ್ ಸಿಲ್ವಿ ಹಾಗೂ ಸಂಘದ ಇತರ ಕಾರ್ಯಕಾರಿ ಸದಸ್ಯರುಗಳು ಹಾಜರಿದ್ದರು.