ವೀರಾಜಪೇಟೆ, ಡಿ. 24: ವೀರಾಜಪೇಟೆಯ ಮೂರ್ನಾಡು ರಸ್ತೆಯಲ್ಲಿರುವ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯಿಂದ ತಾ:26ರಂದು ಕಂಡಂಗಾಲ ಗ್ರಾಮದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನೃತ್ಯೋತ್ಸವ(ಡಾನ್ಸ್ ಡಾನ್ಸ್) 2016 ಕಾಂiÀರ್iಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 7-15ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ನೃತ್ಯೋತ್ಸವದ ಪ್ರಯುಕ್ತ ನಿರ್ಮಿಸಿರುವ ವಿವಿಧ ದ್ವಾರಗಳನ್ನು ಕಂಜಿತಂಡ ವಾಸು ಚಿಣ್ಣಪ್ಪ, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ಅಚ್ಚಪಂಡ ಪೊನ್ನಪ್ಪ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9-30 ಗಂಟೆಗೆ ಶಾಲಾ ಮೈದಾನದಲ್ಲಿ ನೃತ್ಯೋತ್ಸವ ಅಧ್ಯಕ್ಷರ ಮೆರವಣಿಗೆ, ಸಂಸ್ಥೆಯ ಧ್ವಜ ವಂದನೆ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಶಂಕರಿ ಪೊನ್ನಪ್ಪ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಶಶಿ ಸುಬ್ರಮಣಿ ಭಾಗವಹಿಸಲಿದ್ದಾರೆ.

ಇದೇ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಪದ್ಮಿನಿ ಪೊನ್ನಪ್ಪ, ಕೂಪದಿರ ಶಾರದ ನಂಜಪ್ಪ, ಬಾನಂಡ ರೀನಾ ಅಶೋಕ್, ಮೂಕಚಂಡ ನಿರನ್, ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ಡಾ:ಚಂದೂರ ಬಿದ್ದಪ್ಪ, ಕೋಲತಂಡ ಕಾಮವ್ವ, ಮಂದಮಾಡ ಸಾದಲಿ, ಬಲ್ಲಡಿಚಂಡ ಚಿಟ್ಟಿಯಪ್ಪ ಹಾಗೂ ಹೆಚ್.ಕೆ.ಪಾಂಡು ಇವರುಗಳನ್ನು ಸನ್ಮಾನಿಸಲಾಗುವದು.

ಸಭಾ ಕಾರ್ಯಕ್ರಮದಲ್ಲಿ ಶಶಿ ಸುಬ್ರಮಣಿ, ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಲೋಕೇಶ್ ಸಾಗರ್, ತಾಲೂಕು ಸಮಿತಿಯ ಅಧ್ಯಕ್ಷ ಮಧೋಶ್ ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಹೆಗ್ಗಡೆ ಸಮಾಜದ ಅಧ್ಯಕ್ಷ ಪಿ.ಜಿ. ಅಯ್ಯಪ್ಪ ಭಾಗವಹಿಸಲಿದ್ದಾರೆ.