ಸೋಮವಾರಪೇಟೆ, ಅ. 14: ಇಲ್ಲಿನ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಆಯುಧ ಪೂಜಾ ಅಂಗವಾಗಿ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ನಡೆದ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ಜಾನವಿ ತಂಡ ಪ್ರಥಮ ಸ್ಥಾನ ಗಳಿಸಿದೆ.
ಡ್ಯಾನ್ಸ್ ವಾರಿಯರ್ಸ್ ತಂಡ ದ್ವಿತೀಯ, ವಿದ್ಯಾ ತಂಡ ತೃತೀಯ ಸ್ಥಾನ ಗಳಿಸಿದೆ. ಪ್ರೌಢಶಾಲಾ ವಿಭಾಗದಲ್ಲಿ ಬ್ಲಾಸಂ ತಂಡ (ಪ್ರಥಮ), ಮುಕೇಶ್ ತಂಡ (ದ್ವಿತೀಯ), ಶೋ ಸ್ಟಿಲರ್ರ್ಸ್ (ತೃತೀಯ), ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪಂಚರಂಗಿ ತಂಡ (ಪ್ರಥಮ), ಮಯೂರಿ ತಂಡ (ದ್ವಿತೀಯ), ಫಿನಿಕ್ಸ್ ತಂಡ ತೃತೀಯ ಸ್ಥಾನ ಗಳಿಸಿತು.
ವಾಹನಗಳ ಅಲಂಕಾರ ಸ್ಪರ್ಧೆಯ ವರ್ಕ್‍ಶಾಪ್ ವಿಭಾಗದಲ್ಲಿ ಮಂಜುನಾಥ ಕುಷನ್ ವರ್ಕ್ ಪ್ರಥಮ, ಮಾನ್ಯ ಕುಷನ್ ವರ್ಕ್ ದ್ವಿತೀಯ, ಪೋಲಿಸ್ ಠಾಣೆ ತೃತೀಯ, ಅತೀ ಹೆಚ್ಚು ಅಂಕ ಗಳಿಸಿದ ಪದವಿ ವಿಭಾಗದಲ್ಲಿ ಡಾನ್ಸಿ ಡೊಮೆನಿಕ್ (ಪ್ರಥಮ), ಪ್ರಶಾಂತ್( ದ್ವಿತೀಯ), ಬಿ.ಕೆ. ರಸ್ವಿತ್ (ತೃತೀಯ), ದ್ವಿತೀಯ ಪಿ.ಯು.ಸಿ.ಯಲ್ಲಿ ಎಂ.ಎಸ್. ನಿಶಾ (ಪ್ರಥಮ), ಎನ್. ಸಿಮ್ರಾನ್ (ದ್ವಿತೀಯ), ಕೆ.ಎನ್. ತೃಪ್ತಿ (ತೃತೀಯ), ಹತ್ತನೇ ತರಗತಿಯಲ್ಲಿ ಅಶ್ವಿತ ಶೆಟ್ಟಿ (ಪ್ರಥಮ), ಮಕ್ಯೂನ್ ಡಿಸೋಜ (ದ್ವಿತೀಯ), ಅಲ್ಮಿಕ (ತೃತೀಯ), ಎಂಟನೇ ತರಗತಿಯಲ್ಲಿ ಸಿಂಚನ (ಪ್ರಥಮ), ಟಿ.ಆರ್. ಅನನ್ಯ (ದ್ವಿತೀಯ), ಬಿ.ಎಂ. ಜಯಶ್ರೀ (ತೃತೀಯ) ಸ್ಥಾನಗಳಿಸಿದರು.