ಗೋಣಿಕೊಪ್ಪಲು, ಅ. 14 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಹಾಕಿಲೀಗ್ನಲ್ಲಿ ಎಸ್ಆರ್ಸಿ ಕಾಕೋಟುಪರಂಬು ತಂಡವು ಆರ್ವೈಸಿ ಬಾಡಗ ತಂಡದ ವಿರುದ್ದ ಜಯ ಸಾಧಿಸಿದೆ.
4-0 ಗೋಲುಗಳ ಮೂಲಕ ಜಯ ಸಾಧಿಸಿತು. ವಿಜೇತ ತಂಡದ ಪರ 16, 24 ನಿಮಿಷಗಳಲ್ಲಿ ಸೋಮಣ್ಣ, 18 ರಲ್ಲಿ ನರೇನ್, 12 ರಲ್ಲಿ ಪೊನ್ನಣ್ಣ ಗೋಲು ಹೊಡೆದರು.
ಬೇಗೂರು ಮತ್ತು ಕೋಣನಕಟ್ಟೆ ತಂಡಗಳ ನಡುವಿನ ಪಂದ್ಯ ಡ್ಯಾದಲ್ಲಿ ಅಂತ್ಯವಾಯಿತು. ಬೇಗೂರು ಪರ 25 ರಲ್ಲಿ ಅಪ್ಪಚ್ಚು, 47 ರಲ್ಲಿ ಮಣಿ, ಕೋಣನಕಟ್ಟೆ ಪರ 12 ಹಾಗೂ 16 ರಲ್ಲಿ ಯಶ್ವಿನ್ ಗೋಲು ಬಾರಿಸಿದರು.
ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡ 34 ನೇ ನಿಮಿಷದಲ್ಲಿ ನವೀನ್ ಬಾರಿಸಿದ ಏಕೈಕ ಗೋಲಿನಿಂದ ಎಂಆರ್ಎಫ್ ಮೂರ್ನಾಡು ತಂಡವನ್ನು ಮಣಿಸಿತು.
ಅಮ್ಮತ್ತಿ ಈಗಲ್ಸ್ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾ ಫಲಿತಾಂಶ ನೀಡಿತು. ಈಗಲ್ಸ್ ಪರ 11 ರಲ್ಲಿ ಅಯ್ಯಪ್ಪ, 35 ರಲ್ಲಿ ಲಾಲ ಅಯ್ಯಣ್ಣ, ಹಾಸ್ಟೆಲ್ ಪರ 10 ರಲ್ಲಿ ಪೂವಯ್ಯ, 43 ನೇ ನಿಮಿಷದಲ್ಲಿ ಸೂರ್ಯ ಗೋಲು ಹೊಡೆದರು.
ಹಾತೂರು ತಂಡವು ಚಾರ್ಮರ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಹಾತೂರು ಪರ 38 ಹಾಗೂ 47 ನೇ ನಿಮಿಷಗಳಲ್ಲಿ ಶಾನ್ ಗೋಲು ಹೊಡೆದು ಗೆಲುವಿನ ರೂವಾರಿಯಾದರು.
ಬಿಬಿಸಿ ತಂಡವು 2-1 ಗೋಲುಗಳಿಂದ ಯುಎಸ್ಸಿ ಗ್ರೀನ್ ತಂಡವನ್ನು ಸೋಲಿಸಿತು. ಗ್ರೀನ್ ಪರ 3 ನೇ ನಿಮಿಷದಲ್ಲಿ ಪೊನ್ನಣ್ಣ, ಬಿಬಿಸಿ ಪರ 23 ರಲ್ಲಿ ಸಂದೇಶ್, 37 ರಲ್ಲಿ ಅವಿನಾಶ್ ಗೋಲು ಬಾರಿಸಿದರು.
ಯುಎಸ್ಸಿ ರೆಡ್ ತಂಡವು ಢಾಲ್ಫಿನ್ಸ್ ತಂಡವನ್ನು 46 ನೇ ನಿಮಿಷದಲ್ಲಿ ವರುಣ್ ಬಾರಿಸಿದ ಏಕೈಕ್ ಗೋಲಿನಿಂದ ಜಯ ಸಾಧಿಸಿತು.