ಮಡಿಕೇರಿ, ಅ. 31: ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಚರ್ಚೆ ಗಳಾಗುತ್ತಿವೆ. ಜಿಲ್ಲೆಯಲ್ಲಿ ಟಿಪ್ಪುವಿನಿಂದ ನಡೆದಿದೆ ಎನ್ನಲಾಗುತ್ತಿರುವ ಮಾರಣ ಹೋಮದ ಬಗ್ಗೆ ವ್ಯಾಪಕ ಚರ್ಚೆ ಗಳಾಗಬೇಕಾದ ಅಗತ್ಯವಿದೆ ಎಂದು ಮಾಜಿ ಸಂಸದ ಅಡಗೂರು ವಿಶ್ವನಾಥ್ ಹೇಳಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೇಳಿಬರುತ್ತಿರುವ ಪರ - ವಿರೋಧಗಳ ಹೇಳಿಕೆಯ ಬಗ್ಗೆ ಅವರು ಮಾತನಾಡಿದರು. ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಟಿಪ್ಪು ಚರಿತ್ರೆಯ ಬಗ್ಗೆ ಎಲ್ಲವೂ ಗೊತ್ತಿರುವವರ ಹಾಗೆ ಅನೇಕರು ಮಾತ ನಾಡಿದ್ದಾರೆ. ಟಿಪ್ಪುವಿನಿಂದ ನಡೆದಿದೆ ಎನ್ನಲಾದ ಮಾರಣ ಹೋಮದ ಬಗ್ಗೆ ಚರ್ಚೆ ಅಗತ್ಯ. ಇದು 350 ವರ್ಷಗಳ ಹಿಂದಿನ ಘಟನೆಯಾಗಿದೆ. ಆಗ ಕೊಡಗಿನ ಜನಸಂಖ್ಯೆ ಹಾಗೂ ಕೊಡವರ ಜನಸಂಖ್ಯೆ ಎಷ್ಟಿತ್ತು ಎಂಬದರ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಟಿಪ್ಪು ಕನ್ನಡ ವಿರೋಧಿ ಹಾಗೂ ಕೊಡವರ ಹತ್ಯೆ ಮಾಡಿದ್ದಾನೆ ಎಂಬದಕ್ಕೆ ಯಾವದೇ ಆಧಾರವಿಲ್ಲ. ಈ ಬಗ್ಗೆ ಚರ್ಚೆ ಅಗತ್ಯ. ಟಿಪ್ಪು ಬಗ್ಗೆ ಇಲ್ಲ- ಸಲ್ಲದ ಮಾತುಗಳನ್ನಾಡು ತ್ತಿದ್ದಾರೆ ಎಂದು ಹೇಳಿದರು.

ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇಷ್ಟವಿದ್ದವರು ಮಾತ್ರ ಭಾಗವಹಿಸಬಹುದು. ಇಷ್ಟವಿಲ್ಲದವರು ಭಾಗವಹಿಸುವ ಅಗತ್ಯವಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ದೇಶದ ಜನತೆ ಬದುಕು ಸಾಗಿಸುತ್ತಿದ್ದಾರೆ. ಎಲ್ಲಾ ಧರ್ಮದವರು ವಾಸ ಮಾಡುತ್ತಿದ್ದಾರೆ. ಎತ್ತಿ ಕಟ್ಟುವ ಕೆಲಸ ಯಾರಿಂದಲೂ ಆಗಬಾರದು. ಟಿಪ್ಪು ಜಯಂತಿ ಆಚರಣೆಯಿಂದ ಕಾಂಗ್ರೆಸ್‍ಗೆ ಯಾವದೇ ರೀತಿಯ ಧಕ್ಕೆಯಿಲ್ಲ ಎಂದು ಹೇಳಿದರು.

(ಮೊದಲ ಪುಟದಿಂದ) ರಾಜಕೀಯ ಸಂಧ್ಯಾ ಕಾಲದಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುತ್ತಿದ್ದಾರೆ. ಜೊತೆಗೆ ಇದ್ದವರ ತೀರ್ಮಾನ ಅವರ ವೈಯಕ್ತಿಕವಾಗಿದೆ. ಬಿಜೆಪಿ ಸೇರುವ ಬಗ್ಗೆ ಬೇಸರ ತರಿಸಿದೆ ಎಂದ ಅವರು ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದ್ವಂದ್ವ ನಿಲುವುಗಳಿವೆ. ಭ್ರಷ್ಟಾಚಾರದಲ್ಲಿ ಯಾರು ಯಾರಿಗೂ ಕಡಿಮೆಯಿಲ್ಲ. ಮೂರು ಪಕ್ಷಗಳಲ್ಲೂ ಭ್ರಷ್ಟಾಚಾg Àವಿದೆ. ಕಾಂಗ್ರೆಸ್‍ನಲ್ಲಿ ಪ್ರಾಮಾಣಿಕತೆ ಇತ್ತು. ಈಗ ಪಕ್ಷ ಜನರ ನಂಬಿಕೆಯಿಂದ ದೂರ ಸರಿಯುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದರು.