ಶ್ರೀಮಂಗಲ, ನ. 24: ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ನೂತನ ಕಟ್ಟಡ ಹಾಗೂ ಕೊಡವ ಸಾಂಸ್ಕøತಿಕ ಕೇಂದ್ರವನ್ನು ಡಿಸೆಂಬರ್ 8ಕ್ಕೆ ಲೋಕಾರ್ಪಣೆಯಾಗಲಿದೆ.
ಸುಮಾರು ರೂ.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯರಾಗಿದ್ದ ಟಿ.ಜಾನ್ ರೂ. 5 ಲಕ್ಷ, ಕೊಡಗು-ಮೈಸೂರು ಸಂಸದರಾಗಿದ್ದ ಅಡಂಗೂರು ಹೆಚ್. ವಿಶ್ವನಾಥ್ ಅವರು ರೂ. 3 ಲಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ರೂ. 2 ಲಕ್ಷ ತಮ್ಮ ಶಾಸಕದ ನಿಧಿಯನ್ನು ನೀಡಿದ್ದಾರೆ. ಉಳಿದಂತೆ ದಾನಿಗಳ ನೆರವಿನಿಂದ ಕಟ್ಟಡ ನಿರ್ಮಿಸಲಾಗಿದೆ. ಡಿ. 8 ರಂದು ಬೆಳಿಗ್ಗೆ 10 ಗಂಟೆಗೆ ಅಖಿಲ ಕೊಡವ ಸಮಾಜದ ಗೌರವ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಸಮಾಜದ ಗೌರವ ಅಧ್ಯಕ್ಷ ಮಾಯಣಮಾಡ ಪೂಣಚ್ಚ ಹಾಗೂ ಮಾಜಿ ಉಪಾಧ್ಯಕ್ಷ ಮಚ್ಚಮಾಡ ಉತ್ತಯ್ಯ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಖಿಲ ಕೊಡವ ಸಮಾಜದ ಕಾರ್ಯಧ್ಯಕ್ಷ ಇಟ್ಟೀರ ಬಿದ್ದಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಮಂಡೇಪಂಡ ಸುನಿಲ್ ಸುಬ್ರಮಣಿ, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಮಾಜಿ ಸಂಸದ ಅಡಗೂರು ವಿಶ್ವನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಟಿ. ಜಾನ್, ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಮಚ್ಚಮಾಡ ಸುಮಂತ್ ಭಾಗವಹಿಸಲಿದ್ದಾರೆ.
ಈ ಸಂಧರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರು, 1980ರಲ್ಲಿ ಟಿ. ಶೆಟ್ಟಿಗೇರಿಯಲ್ಲಿ ಕೊಡವ ಸಮಾಜವನ್ನು ಸ್ಥಾಪಿಸಲಾಯಿತು. ಮೊದಲ ಕಟ್ಟದ 1985ರಲ್ಲಿ ಸ್ಥಾಪಿಸಲಾಯಿತು. ಇದೀಗ ನೂತನ ಕಟ್ಟಡವನ್ನು ನಿರ್ಮಿಸಿದ್ದು, ಸಭೆ ಸಮಾರಂಭ ನಡೆಸಲು ಸುಸಜ್ಜಿತ ಸಭಾಂಗಣ ವ್ಯವಸ್ಥೆ ಇದ್ದು ಕೊಡವ ಸಾಂಸ್ಕøತಿಕ ಕೇಂದ್ರವಾಗಿಯೂ ಈ ವ್ಯಾಪ್ತಿಯಲ್ಲಿ ಈ ಕೇಂದ್ರ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಈ ಸಂಧರ್ಭ ಸಮಾಜದ ಗೌರವ ಅಧ್ಯಕ್ಷ ಮಾಯಣಮಾಡ ಪೂಣಚ್ಚ, ಮಾಜಿ ಉಪಾಧ್ಯಕ್ಷ ಮಚ್ಚಮಾಡ ಉತ್ತಯ್ಯ, ಗೌರವ ಸಲಹೆಗಾರ ಮಚ್ಚಮಾಡ ಸೋಮಯ್ಯ, ಕಾರ್ಯದರ್ಶಿ ಮನ್ನೇರ ರಮೇಶ್, ಉಪಾಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್, ನಿರ್ದೇಶಕರುಗಳಾದ ಚೊಟ್ಟೆಯಂಡಮಾಡ ವಿಶು, ಮಾಣೀರ ವಿಜಯ ನಂಜಪ್ಪ, ತಡಿಯಂಗಡ ರಮೇಶ್, ತೀತಿರ ಧರ್ಮಜ ಉತ್ತಪ್ಪ ಆಂಡಮಾಡ ಸತೀಶ್, ನಾಡುತಕ್ಕರಾದ ಕೈಬುಲಿರ ಹರೀಶ್, ಮತ್ತಿತರರು ಹಾಜರಿದ್ದರು.