ಕೂಡಿಗೆ, ಆ. 10: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಶುದ್ಧ ಕುಡಿಯುವ ನೀರನ್ನು ಒದಗಿಸುವ ದೃಷ್ಟಿಯಲ್ಲಿ ಕುಶಾಲನಗರ ಟಾಟಾ ಕಾಫಿ ಸಂಸ್ಥೆಯ ವತಿಯಿಂದ ರೂ. 25 ಸಾವಿರ ವೆಚ್ಚದ 15 ಲೀಟರ್ ಸಾಮಥ್ರ್ಯವಿರುವ ಅಕ್ವಾಗಾರ್ಡ್ ವಾಟರ್ ಪ್ಯೂರಿಫೈಯರ್ (ನೀರು ಶುದ್ಧೀಕರಣ ಯಂತ್ರ) ವನ್ನು ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಿಕ್ಕಿ ಅಯ್ಯಪ್ಪ ಶಾಲಾ ಮುಖ್ಯೋಪಾಧ್ಯಾಯ ಬಿ.ಸಿ. ರಾಜು ಅವರಿಗೆ ಹಸ್ತಾಂತರಿಸಿದರು.

ಟಾಟಾ ಸಂಸ್ಥೆಯ ವತಿಯಿಂದ ಅನೇಕ ಆರೋಗ್ಯ ಚೈತನ್ಯ ಹಾಗೂ ಸಾಮಾಜಿಕ ಕಳಕಳಿಯ ಸೇವೆಗಳನ್ನು ನೀಡುವ ಮನೋಭಾವನೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಸ್ಥೆಯ ವತಿಯಿಂದ ಶಿಕ್ಷಣ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿವಿಧ ಯೋಜನೆಗಳನ್ನು ಮಾಡಲಾಗುವದು ಎಂದರು. ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕರಾದ ಮುನೀಶ್‍ಮಿಶ್ರ, ಗಣೇಶ್, ಶ್ವೇತಾ, ಶಾಲಾ ಶಿಕ್ಷಕರುಗಳಾದ ಆಲಿಸಮ್ಮ, ಸುಮಿತ್ರ, ಶೈಲಜಾ, ಜೂಲಿಯಾನ, ಜಯಣ್ಣ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.