ಗುಡ್ಡೆಹೊಸೂರು, ಡಿ. 25: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಗಿರಿಜನ ಸಹಕಾರ ಸಂಘದ ವತಿಯಿಂದ ಸುಮಾರು 12 ವರ್ಷದ ಹಿಂದೆ ಜೇನು ಶುದ್ಧೀಕರಣ ಘಟಕ ಸ್ಥಾಪನೆಯಾಗಿತ್ತು. ಪ್ರಾರಂಭದಲ್ಲಿ ಕಾರ್ಯನಿರ್ವಹಿಸಿ ಘಟಕ ಸ್ಥಗಿತಗೊಂಡಿತ್ತು. ಇದೀಗ ಘಟಕವನ್ನು ಮತ್ತೆ ಪ್ರಾರಂಭಿಸಿದ್ದು, ಗ್ರಾಹಕರಿಗೆ ಉತ್ತಮ ಶುದ್ಧವಾದ ಕಾಡು ಜೇನನ್ನು ಸಂಘದ ವತಿಯಿಂದ ನೀಡುವದಾಗಿ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ತಿಳಿಸಿದ್ದಾರೆ. ಅಲ್ಲದೆ ಸಂಘದ ವತಿಯಿಂದ ಸೀಗೆಪುಡಿ ಘಟಕ ಕಾರ್ಯನಿರ್ವಹಿಸುತ್ತಿದೆ.

ವಿವಿಧ ರೀತಿಯ ಮರದ ಪೀಠೋಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಹೊಸದಾಗಿ ಪ್ರಾರಂಭಿಸಿದ ಜೇನು ಘಟಕದ ಉದ್ಘಾಟನೆ ಸಮಾರಂಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮತ್ತು ಉಪಾಧ್ಯಕ್ಷ ಸಣ್ಣಪ್ಪ, ಕಾರ್ಯದರ್ಶಿ ಯೋಗಣ್ಣ, ಹನಿ ಮತ್ತು ನಿರ್ದೇಶಕರಾದ ಆರ್.ಕೆ. ಚಂದ್ರ, ಬಿ.ಕೆ. ಮೋಹನ್, ಸುಲೋಚನ, ಸವಿತ, ಚೆಲುವಪ್ಪ, ಉದಯಕುಮಾರ್ ಮುಂತಾದವರು ಹಾಜರಿದ್ದರು.