ಗೋಣಿಕೊಪ್ಪಲು, ಡಿ. 25: ಸರ್ಕಾರ ಗ್ರಾಮೀಣ ಭಾಗದ ಜನತೆಗೆ ಸಹಕಾರವಾಗಲು ಅನೇಕ ಅನುಧಾನಗಳನ್ನು ಬಿಡುಗಡೆಗೊಳಿಸುತ್ತಿದೆ, ಇದರಲ್ಲಿ ಗ್ರಾಮೀಣ ರಸ್ತೆಗೆ ಹೆಚ್ಚು ಒತ್ತು ನೀಡಿದ್ದು ಈ ಬಾರಿ ತಾಲೂಕು ಪಂಚಾಯಿತಿಯಿಂದ ಬಿಡುಗಡೆಯಾದ ಅನುದಾನದಲ್ಲಿ ರೂ. 1 ಲಕ್ಷ ಅನುದಾನವನ್ನು ರಸ್ತೆ ಕಾಮಗಾರಿಗೆ ಮೀಸಲಿಟ್ಟಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ದೇವರಪುರ ತಾಲೂಕು ಪಂಚಾಯಿತಿ ಸದಸ್ಯೆ ಆಶಾ ಜೇಮ್ಸ್ ಹೇಳಿದರು.

ತಾಲೂಕು ಪಂಚಾಯಿತಿಯಿಂದ ಬಿಡುಗಡೆಯಾದ ರೂ. 1 ಲಕ್ಷ ಅನುದಾನವನ್ನು ತಿತಿಮತಿ ಪಂಚಾಯಿತಿಗೆ ಒಳಪಡುವ ದೇವಮಚ್ಚಿಯ ರಾಜನ್ ಎಂಬವರ ಮನೆಗೆ ತೆರಳಲು ಕಾಂಕ್ರಿಟ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮದ ಜನತೆ ಗುತ್ತಿಗೆದಾರರಿಂದ ಕೆಲಸವಾಗುವ ಸಂದರ್ಭ ಉತ್ತಮ ಕಾಮಗಾರಿ ಆಗುವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕೆಂದು ಇದೇ ಸಂದರ್ಭ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ಮರೂರುವಿನ ವಿನಯ್‍ಕುಮಾರ್ ಮಾತನಾಡಿ, ಗ್ರಾಮೀಣ ಭಾಗಕ್ಕೆ ಆದ್ಯತೆ ನೀಡಿರುವದು ಶ್ಲಾಘನಿಯವೆಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಮುಂದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಗ್ರಾಮದಲ್ಲಿ ಆಗಬೇಕಾಗಿದೆ. ಜಿಲ್ಲಾ ಪಂಚಾಯಿತಿ ಅನುದಾನ ಲಭ್ಯವಾದಲ್ಲಿ ಆದ್ಯತೆ ಮೇರೆ ಕಾಮಗಾರಿಗೆ ಒತ್ತು ನೀಡಲಾಗುವದು ಎಂದರು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್, ಸದಸ್ಯರಾದ ಶ್ರೀನಿವಾಸ್, ಮಾಜಿ ಝೋನಾಲ್ ಕಾಂಗ್ರೆಸ್ ಅಧ್ಯಕ್ಷ ಡಾ. ಮದ್ಯಸ್ಥ, ಅಪ್ರೋಸ್, ಪಿ.ಡಿ.ಓ. ಲೋಕನಾಥ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.