ಸೋಮವಾರಪೇಟೆ, ಡಿ. 19: ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿಡ್ಡಳ್ಳಿ ತಟ್ಟಳ್ಳಿ ಅರಣ್ಯ ಪೈಸಾರಿ ಜಾಗದಲ್ಲಿ ಗಿರಿಜನರ ಗುಡಿಸಲುಗಳನ್ನು ಅರಣ್ಯ ಇಲಾಖೆ ನೆಲಸಮ ಗೊಳಿಸಿರುವ ಕ್ರಮ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ಯ ಜಿಲ್ಲಾ ಸಂಯೋಜಕ ಜಿ. ಆರ್. ಪಾಲಾಕ್ಷ ಹೇಳಿದ್ದಾರೆ.
ವಾಸಿಸಲು ಮನೆಗಾಗಿ ಹೋರಾಟ ಮಾಡುತ್ತಿರುವ ಗಿರಿಜನ ಮುಖಂಡರ ಮೇಲೆ ದೌರ್ಜನ್ಯ ವೆಸಗಿರುವದು ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.