ಪಾಲಿಬೆಟ್ಟ, ಮೇ 27: ಮೂಲಭೂತ ಸಮಸ್ಯೆ ಎದುರಿಸುತ್ತಿರುವ ಚೆನ್ನಯ್ಯನಕೋಟೆ ಹಾಗೂ ಮಾಲ್ದಾರೆ ವ್ಯಾಪ್ತಿಯ, ಅಂಚೆತಿಟ್ಟು ಆಸ್ಥಾನ, ತಟ್ಟಳ್ಳಿ, ಚಿಕ್ಕರೇಷ್ಮೆ, ದೈಯ್ಯದಹಡ್ಲು ಮತ್ತು ಕೋಟೆಮಂಚಿ ಸೇರಿದಂತೆ 8 ಗಿರಿಜನ ಹಾಡಿಗಳಿಗೆ ಐಟಿಡಿಪಿ ಜಿಲ್ಲಾ ಅಧಿಕಾರಿ ಸತೀಶ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಇಲ್ಲಿನ ಹಾಡಿಯ ನಿವಾಸಿಗಳು ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಮತ್ತು ಸೇತುವೆ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದರು. ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಕ್ಷಣವೇ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಜಿ.ಪಂ. ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು. ಹಾಡಿಗಳಿಗೆ ಏನೇನು ಮಾಡಬೇಕೆಂದು ಸೂಚಿಸಿ ತಕ್ಷಣದಿಂದಲೇ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.