ಮಡಿಕೇರಿ, ಜ. 29: ಜಿಲ್ಲಾಡಳಿತ ವತಿಯಿಂದ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ 68ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತ ಸೇವಾದಳದಲ್ಲಿ ‘ಸೇವೆಗಾಗಿ ಬಾಳು’ ಎಂಬ ತತ್ವದಡಿಯಲ್ಲಿ ಸೇವೆ ಸಲ್ಲಿಸಿದಂತಹ ಮೂವರು ಶಾಲಾ ಶಿಕ್ಷಕರಾದ ಸಿ.ಎಂ. ಜಯಶ್ರೀ, ಸಹ ಶಿಕ್ಷಕರು, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಗ್ಗೋಡ್ಲು, ಐ.ಈ. ನಂದ, ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ, ರೋಜಿರಾಣಿ ಪಿಳ್ಳೆ, ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಚೆನ್ನಯ್ಯನಕೋಟೆ ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ನಡೆದ ಪಥಸಂಚಲನದಲ್ಲಿ ಮಡಿಕೇರಿ ಸರಕಾರಿ ಪ್ರೌಢಶಾಲೆಯ ಭಾರತ ಸೇವಾದಳ ತಂಡ ಪ್ರಥಮ ಬಹುಮಾನ ಗಳಿಸಿತು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಪರವಾಗಿ ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಎ.ಕೆ. ಪಾಲಾಕ್ಷ, ಜಿಲ್ಲಾ ಸಮಿತಿ ಖಜಾಂಚಿ ಎನ್.ಎಂ. ಕಾಳಪ್ಪ, ಸೇವಾದಳ ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ಕೋಡಿ ಚಂದ್ರಶೇಖರ್, ಸೇವಾದಳ ಶಿಕ್ಷಕರುಗಳಾದ ಡಿ.ಎಂ. ರೇವತಿ, ಡಿ.ಹೆಚ್. ಪುಷ್ಪ ಪಾಲ್ಗೊಂಡಿದ್ದರು.