ಮಡಿಕೇರಿ, ಜ. 22: ತಾ. 26 ರಂದು ದೆಹಲಿ ಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ರಾಷ್ಟ್ರದ ಎನ್‍ಸಿಸಿ ಮಹಿಳಾ ಘಟಕವನ್ನು ಮಡಿಕೇರಿಯ ಎ.ಜಿ. ಐಶ್ವರ್ಯ ಮುನ್ನೆಡಸಲಿದ್ದಾಳೆ.ನಗರದ ಸಂತ ಜೋಸೆಫರ ಕಾನ್ವೆಂಟ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾಗಿ, ಎಫ್‍ಎಂಕೆಎಂಸಿ ಕಾಲೇಜಿನ ಎನ್‍ಸಿಸಿ ಘಟಕದ ವಿದ್ಯಾರ್ಥಿ ಯಾಗಿರುವ ಈಕೆ, ಮಡಿಕೇರಿಯ ಎ.ಎ. ಗಣೇಶ್ ಹಾಗೂ ಮೋಂತಿ ಅವರ ಪುತ್ರಿ.
ಕರ್ನಾಟಕಕ್ಕೆ ಹಲವು ವರ್ಷಗಳ ಬಳಿಕ ಈ ಗೌರವ ಲಭ್ಯವಾಗಿದ್ದು, ಎಫ್‍ಎಂಕೆಎಂಸಿ ಕಾಲೇಜಿನ ಮೇಜರ್ ರಾಘವನ್ ವಿದ್ಯಾರ್ಥಿಗಳನ್ನು ಮುನ್ನಡೆಸಲಿದ್ದಾರೆ.