ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಆವರಣದಲ್ಲಿ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಯೋಜಿಸಿದ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರ ತಂದಿರುವ ‘ಭಾರತದ ಸ್ವಾತಂತ್ರ್ಯ ಚಳವಳಿ’ ಪಕ್ಷಿನೋಟ ಕಿರುಹೊತ್ತಿಗೆ ಯನ್ನು ಬಿಡುಗಡೆ ಮಾಡಿದರು. ಬಳಿಕ ‘ಸ್ವಾತಂತ್ರ್ಯದಿಂದ ಸಾಮಾಜಿಕ ನ್ಯಾಯದೆಡೆಗೆ ನಮ್ಮ ಪಯಣ’ ಕುರಿತ ವಿಶೇಷ ಪ್ರಚಾರಾಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.
ಪ್ರಚಾರಾಂದೋಲನದಲ್ಲಿ ಮಹಾತ್ಮಾ ಗಾಂಧೀಜಿಯವರ ‘ನನ್ನ ಜೀವನವೇ-ನನ್ನ ಸಂದೇಶ’, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ‘ಉತ್ತಮ ಸಾಮಾಜಿಕ, ಸಮಾನತೆಯು ಅತ್ಯಗತ್ಯ’ ಎನ್ನುವ ಸಂದೇಶ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲಾತಿ, ಪಂಚಾಯತಿ ರಾಜ್‍ನಲ್ಲಿ ಶೇ.50 ರ ಮೀಸಲಾತಿ ಬಿಂಬಿಸುವ ಮಹಿಳಾ ಸಮಾನತೆ, ತಳ ಸಮುದಾಯದ ಏಳಿಗೆ, ಹಿಂದುಳಿದವರ ಅಭಿವೃದ್ಧಿ, ಆಹಾರ ಭದ್ರತೆಗಾಗಿ ಅನ್ನಭಾಗ್ಯ, ಸಂವಿಧಾನದ ಆಶಯಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ ಎನ್ನುವ ಮುಖ್ಯಮಂತ್ರಿಗಳ ಆಶಯವನ್ನು ಬಿಂಬಿಸುವ ಸ್ವಾತಂತ್ರ್ಯೋತ್ಸವ ವಿಶೇಷ ಪ್ರಚಾರಾಂದೋಲನ ಜರುಗಲಿದೆ.
ಜಿಲ್ಲೆಯಲ್ಲಿ 10 ದಿನಗಳ ಕಾಲ ಬೀದಿನಾಟಕ ಮೂಲಕ ಸರ್ಕಾರದ ಕಾರ್ಯಕ್ರಮಗಳ ವಿಶೇಷ ಪ್ರಚಾರಾಂದೋಲನ ನಡೆಯಲಿದೆ. ಇದೇ ಸಂದರ್ಭ ವಿದ್ಯಾಸಾಗರ ಕಲಾ ವೇದಿಕೆಯ ಈ. ರಾಜು ಮತ್ತು ತಂಡದವರು ಅನ್ನಭಾಗ್ಯ ಯೋಜನೆ ಕುರಿತು ಹಾಡು ಹಾಡಿ ಗಮನ ಸೆಳೆದರು.
ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ, ಜಿ.ಪಂ. ಉಪಾಧ್ಯಕೆÀ್ಷ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕೆÀ್ಷ ಶ್ರೀಮತಿ ಬಂಗೇರ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕೆÀ್ಷ ಸುರಯ್ಯ ಅಬ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಕರ್ನಾಟಕ ಅರೆಭಾಷೆ ಸಂಸ್ಕøತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ವಾರ್ತಾಧಿಕಾರಿ ಚಿನ್ನಸ್ವಾಮಿ ಮತ್ತಿತರರು ಇದ್ದರು.