ಕುಶಾಲನಗರ, ಆ. 15: ಯುವ ಪೀಳಿಗೆ ದೇಶಭಕ್ತಿಯೊಂದಿಗೆ ಸಾಮಾಜಿಕ ಕರ್ತವ್ಯ ಪ್ರಜ್ಞೆ ಬೆಳೆಸಿ ಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಎಂ.ಹೆಚ್. ನಜೀರ್ ಅಹಮ್ಮದ್ ಕರೆ ನೀಡಿದ್ದಾರೆ.ಅವರು ಕುಶಾಲನಗರದ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಆಶ್ರಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 70 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದಿನದ ಸಂದೇಶ ನೀಡಿ ಮಾತನಾಡಿದರು. ಮಾನವನಿಗೆ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯವಾಗಿದೆ ಎಂದ ಅವರು ದೇಶ ರಕ್ಷಣೆಯಲ್ಲಿ ಸಾಮಾನ್ಯ ಜನರ ಕರ್ತವ್ಯ ಕೂಡ ಪ್ರಮುಖ ವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಯುವಪೀಳಿಗೆ ದೇಶದ ಶಕ್ತಿಯಾಗಿದೆ ಎಂದರಲ್ಲದೆ, ಯುವಶಕ್ತಿ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗದೆ ದೇಶಕ್ಕೆ ಮಾರಕವಾಗಿರುವ ಭ್ರಷ್ಟಾಚಾರ, ಭಯೋತ್ಪಾದನೆಯಂತಹ ಪಿಡುಗುಗಳನ್ನು ಕಿತ್ತೊಗೆಯುವಲ್ಲಿ ಶ್ರಮಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕದಳ, ಎನ್‍ಸಿಸಿ, ಶಾಲಾ - ಕಾಲೇಜು ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮುಖ್ಯಸ್ಥ ಸದಾಶಿವ ಎಸ್.ಪಲ್ಲೇದ್ ಪೆರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿ ಆಕರ್ಷಕ ಪೆರೇಡ್ ನಡೆಸಿಕೊಟ್ಟರು.

ನಂತರ ಶಾಲಾ - ಕಾಲೇಜು ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದ ಜನರನ್ನು ರಂಜಿಸಿದವು. ವಿವಿಧ ತಂಡಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಹಾಗೂ ಸ್ಥಳೀಯ ಟೀಂ ಪವರ್ ಸ್ಕೂಲ್ ತಂಡದಿಂದ ಸಾಹಸಿ ಬೈಕ್ ಪ್ರದರ್ಶನ ನೆರೆದವರನ್ನು ರೋಮಾಂಚನ ಗೊಳಿಸಿತು.

ಸಮಾರಂಭದಲ್ಲಿ ಮಾಜಿ ಸೈನಿಕರು, ಅಧಿಕಾರಿಗಳು, ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಕಾರ್ಗಿಲ್ ಹುತಾತ್ಮ ಯೋಧ ಯಂಗಟ ಅವರ ಧರ್ಮಪತ್ನಿ ನೀಲಮ್ಮ ಅವರÀನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರಘು ಸ್ವಾಗತಿಸಿದರು, ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ವಂದಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಅವರು ಪಥಸಂಚಲನ ಮತ್ತು ಸಾಂಸ್ಕøತಿಕ ತಂಡಗಳಿಗೆ ನೆನಪಿನ ಕಾಣಿಕೆ ನೀಡಿದರು.

ಈ ಸಂದರ್ಭ ಪಂಚಾಯ್ತಿ ಸದಸ್ಯರುಗಳಾದ ಹೆಚ್.ಜೆ.ಕರಿಯಪ್ಪ, ಫಜ್ಲುಲ್ಲಾ, ಹೆಚ್.ಎಂ.ಮಧುಸೂದನ್, ಉಪಸಮಿತಿಯ ಅಧ್ಯಕ್ಷರುಗಳಾದ ಪಿ.ಕೆ. ಜಗದೀಶ್, ಎಂ.ಕೃಷ್ಣ, ಚನ್ನಕೇಶವ ಮೂರ್ತಿ, ಉತ್ತಪ್ಪ, ಮೊಣ್ಣಪ್ಪ, ಕೆ.ಟಿ.ಶ್ರೀನಿವಾಸ್ ಮತ್ತಿತರರು ಇದ್ದರು.

ಕೂಡಿಗೆ ಡೈರಿ ವತಿಯಿಂದ ನೀಡಿದ ಉಚಿತ ಸಿಹಿ ಹಾಲನ್ನು ಪಥ ಸಂಚಲನ ಹಾಗೂ ಸಾಂಸ್ಕøತಿಕ ತಂಡಗಳ ಸದಸ್ಯರಿಗೆ ವಿತರಿಸ ಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಿತಿ ವತಿಯಿಂದ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕುಶಾಲನಗರದಲ್ಲಿ ಭಾನುವಾರ ರಾತ್ರಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ 70 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆತಂಕದೊಂದಿಗೆ ನಡೆಯು ವಂತಾಯಿತು.