ಗೋಣಿಕೊಪ್ಪ, ಜ. 10: ಮಾಯಮುಡಿ ಗ್ರಾಮದಲ್ಲಿರುವ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಅವರ ಮನೆಯಲ್ಲಿ ದರೋಡೆ ನಡೆದಿದ್ದು, ಪೊಲೀಸರು ಆರೋಪಿಗಾಗಿ ಶೋಧÀ ಕಾರ್ಯ ಮುಂದುವರೆಸಿದ್ದಾರೆ.ದರೋಡೆ ಕೋರರು ಮನೆಯಲ್ಲಿ ಬಾಪು ಇಲ್ಲದನ್ನು ಖಾತರಿಪಡಿಸಿ ಕೊಂಡು ರಾತ್ರಿ ವೇಳೆ ಮನೆಯಲ್ಲಿದ್ದ 72ಸಾವಿರ ನಗದು, ಬಂದೂಕು, ಕಾಗದಪತ್ರಗಳು ಹಾಗೂ 14 ತೋಟಗಳನ್ನು ಕದ್ದೊಯ್ಯುವ ಪ್ರಯತ್ನ ಮಾಡಿದ್ದರು.ದರೋಡೆ ನಡೆಯುತ್ತಿರುವ ವಿಚಾರ ಅಕ್ಕಪಕ್ಕದವರಿಗೆ ತಿಳಿಯುತ್ತಿದ್ದಂತೆಯೇ ಆರೋಪಿ ಆತುರದಲ್ಲಿ ಮನೆಯಿಂದ ಹೊರಬಿದ್ದು ಹಿಂಬಾಗಿಲಿನ ಮೂಲಕ ಪರಾರಿಯಾಗುತ್ತಿದ್ದಂತೆಯೇ, ಹೊರ ಗಡೆ ಇರುವ ಹೂ ಕುಂಡಕ್ಕೆ ಕತ್ತಲಲ್ಲಿ ದರೋಡೆಕೋರ ಎಡವಿ ಬಿದ್ದಿದ್ದ ರಿಂದ ಕಳವು ಮಾಡಿದ್ದ ವಸ್ತುಗಳೆಲ್ಲ ವನ್ನು ಬಿಸಾಡಿ ಕತ್ತಲಿನಲ್ಲಿ ಸಮೀಪದ ತೋಟದಲ್ಲಿ ಮಾಯ ವಾಗಿದ್ದಾನೆ.

ಪೊಲೀಸರ ಕಾರ್ಯಚರಣೆ: ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದ ಮನೆ ಮಾಲೀಕ ಬಾಪು ಅವರಿಗೆ ತನ್ನ ಪತ್ನಿ ದೂರವಾಣಿ ಮೂಲಕ ಸಂಪರ್ಕಿಸಿ ನಡೆದ ಘಟನೆಗಳನ್ನು ವಿವರಿಸಿದ ನಂತರ ಬಾಪುರವರು ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್ ಹಾಗೂ ಗೋಣಿಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ದರೋಡೆ ಕೋರನ ಹುಡುಕಾಟ ನಡೆಸಿದರಾದರೂ ದರೋಡೆಕೋರ ತೋಟದಲ್ಲಿ ತಪ್ಪಿಸಿಕೊಂಡಿದ್ದ. ನಡುರಾತ್ರಿಯಲ್ಲಿ ಮಡಿಕೇರಿಯಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ದರೋಡೆಕೋರ ಬಿಟ್ಟು ಹೋಗಿರುವ ಸುಳಿವನ್ನು ಪರಿಶೀಲನೇ ಮಾಡಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಬಾಪು ಅವರ ಕಾಫಿ ತೋಟದಲ್ಲಿದ್ದ ಫಸಲು ಭರಿತ ಒಳ್ಳೆ ಮೆಣಸು ಬಳ್ಳಿಗಳನ್ನು ಕಳ್ಳರು ಕಡಿದು ಲಕ್ಷಾಂತರ ಹಣವನ್ನು ನಷ್ಟ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಕೂಡ ಯಾರನ್ನು ಬಂಧಿಸಿಲ್ಲ. ಈ ಘಟನೆ ಮಾಸುವ ಮುನ್ನವೇ ಮನೆಯಲ್ಲಿ ಯಜಮಾನ ಇಲ್ಲದ ಸಂದರ್ಭ ದರೋಡೆ ನಡೆದಿದ್ದು ಮನೆಯವರ ಹಾಗೂ ನೆರೆಕರೆಯವರ ನಿದ್ದೆಗೆಡಿಸಿದೆ ಪೊಲೀಸರು ಆರೋಪಿಯ ಸುಳಿವಿಗಾಗಿ ಬಲೆ ಬೀಸಿದ್ದು ವಿಶೇಷ ತಂಡವನ್ನು ರಚಿಸಿ ಪೊಲೀಸ್ ಅಧಿಕಾರಿಗಳು ದರೋಡೆಕೋರರನ್ನು ಬಂಧಿಸಲು ಕ್ರಮಕ್ಕೆ ಮುಂದಾಗಿದ್ದಾರೆ.