ಸೋಮವಾರಪೇಟೆ, ಜೂ.16: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತಾ ಯುವ ಕಾರ್ಯಕ್ರಮ, ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ ಮತ್ತು ಬಿಟಿಸಿಜಿ ಕಾಲೇಜು ಆಶ್ರಯದಲ್ಲಿ ತಾ. 17ರಂದು (ಇಂದು) ನೆರೆ ಹೊರೆ ಯುವ ಜನ ಸಂಸತ್ತು ಕಾರ್ಯಕ್ರಮ ನಡೆಯಲಿದೆ ಎಂದು ಯುವ ಒಕ್ಕೂಟದ ಅಧ್ಯಕ್ಷ ದಿವಾಕರ್ ತಿಳಿಸಿದ್ದಾರೆ.
ಅಪರಾಹ್ನ 12 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ ಉದ್ಘಾಟಿಸಲಿದ್ದು, ಶಿಕ್ಷಣ-ಮಹಿಳಾ ಸಬಲೀಕರಣ ವಿಷಯದ ಬಗ್ಗೆ ಅನುಪಮಾ, ಯೋಗದ ಮಹತ್ವದ ಬಗ್ಗೆ ಆರ್ಟ್ ಆಫ್ ಲಿವಿಂಗ್‍ನ ರಾಗಿಣಿ, ಯುವ ಜನ ಸಂಸತ್ತಿನ ಬಗ್ಗೆ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್ ಅವರುಗಳು ಉಪನ್ಯಾಸ ನೀಡಲಿದ್ದಾರೆ.