ಮಡಿಕೇರಿ, ಜೂ. 16: ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಭಗವತಿ ದೇವಿಗೆ ಮಹಿಳೆಯರು ಪ್ರತಿ ತಿಂಗಳು ಹುಣ್ಣಿಮೆಯಂದು ‘ಪೊಂಗಾಲ ನೈವೇದ್ಯ’ ಸಮರ್ಪಣೆ ಮಾಡುವದು ವಿಶೇಷವಾಗಿದೆ.

‘ಪೊಂಗಾಲ’ ಸಮರ್ಪಣೆಯನ್ನು ಮಹಿಳೆಯರು ಮಾತ್ರ ನಡೆಸಬಹುದಾಗಿದೆ. ಮಹಿಳೆಯರು ದೇವಾಲಯದಲ್ಲಿಯೇ ಪೊಂಗಾಲ ನೈವೇದ್ಯವನ್ನು ತಯಾರಿಸಿ ಮಹಿಳೆಯರೇ ಶ್ರೀ ಭಗವತಿ ದೇವಿಗೆ ಪೊಂಗಾಲವನ್ನು ಸಮರ್ಪಿಸಿ ಪೂಜೆ ಸಲ್ಲಿಸಬಹುದಾಗಿದೆ. ‘ಪೊಂಗಾಲ ನೈವೇದ್ಯ’ ತಯಾರಿಕೆಗೆ ಬೇಕಾದ ಅಕ್ಕಿ, ಬೆಲ್ಲ, ತುಪ್ಪ, ಗೋಡಂಬಿ, ದ್ರಾಕ್ಷಿ ಮತ್ತು ಬೇಯಿಸಲು ಪಾತ್ರೆ ಸಲಕರಣೆಗಳು ಸೌದೆ ಮುಂತಾದ ಸಾಮಗ್ರಿಗಳನ್ನು ದೇವಾಲಯ ಸಮಿತಿ ವ್ಯವಸ್ಥೆ ಮಾಡಿದ್ದು, ಭಕ್ತಾದಿಗಳು ನಿಗದಿತ ಶುಲ್ಕ ನೀಡಿ ಪಡೆದುಕೊಳ್ಳಬಹುದಾಗಿದೆ. ಯಾವದೇ ಜಾತಿ ಬೇಧವಿಲ್ಲದೆ ಎಲ್ಲಾ ಹಿಂದೂ ಮಹಿಳಾ ಭಕ್ತಾದಿಗಳು ಒಂದು ದಿನದ ಶುದ್ಧಮುದ್ರಿಕೆಯಲ್ಲಿ ಇದ್ದು ಪೊಂಗಾಲ ಸಮರ್ಪಣೆಯಲ್ಲಿ ಭಾಗವಹಿಸಬಹುದಾಗಿದೆ.

‘ಪೊಂಗಾಲ’ ಸಮರ್ಪಣೆಯು ತಾ. 20 ರಂದು ಸಂಜೆ 5 ಗಂಟೆಯಿಂದ 8.30 ಗಂಟೆಯವರೆಗೆ ನಡೆಯಲಿದೆ. ಈ ನೈವೇದ್ಯ ಸಮರ್ಪಣೆಗೆ ಹೆಸರು ನೋಂದಾಯಿಸುವ ಭಕ್ತಾದಿಗಳು ಮೊಬೈಲ್ ಸಂಖ್ಯೆ 9591173292 ಅಥವಾ 9449402045 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯ ಅಧ್ಯಕ್ಷೆ ಕೊಡಂದೇರ ಸಂಗೀತಾ ಪ್ರಸನ್ನ ಕೋರಿದ್ದಾರೆ.