ಭಾಗಮಂಡಲ, ಅ. 4: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಚಾಲನೆ ನೀಡಿದರು.
ಈ ಸಂದರ್ಭ ಅಮೆ ಪದ್ಮಯ್ಯ ಗೌಡ, ಪಿ.ಎಂ. ರಾಜೀವ್, ಗ್ರಾ.ಪಂ. ಸದಸ್ಯ ರಾಜಾ ರೈ, ಪುರುಷೋತ್ತಮ, ಯೋಗಾನಂದ, ಸಂಘದ ಅಧ್ಯಕ್ಷ ನಿಡ್ಯಮಲೆ ಹರೀಶ್, ಕಾರ್ಯದರ್ಶಿ ಬಾರಿಕೆ ಬಾನು ಹಾಗೂ ಸಂಘದ ಪದಾಧಿಕಾರಿಗಳಿದ್ದರು.